ಉಡುಪಿ: 5 ತಿಂಗಳಿಂದ ವೇತನವಿಲ್ಲದೆ ಬಿಸಿಯೂಟದ ನೌಕರರು ಸಂಕಷ್ಟಕ್ಕೆ
ಉಡುಪಿ ಆ.29 : ಜಿಲ್ಲೆಯ ಬಿಸಿಯೂಟದ ನೌಕರರು ಕಳೆದ ಐದು ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ವರ್ಷದ ಶೈಕ್ಷಣಿಕ ವರ್ಷ ಮೇ 16 ರಿಂದ ಆರಂಭಗೊಂಡಿದ್ದರೂ ಅಕ್ಷರ ದಾಸೋಹ ಸಿಬ್ಬಂದಿಯು ಕಳೆದ ಏಪ್ರಿಲ್ ನಲ್ಲಿ 10 ದಿನಗಳು ಕೆಸಲ ಮಾಡಿದ್ದಾರೆ. ಮೇ ಯಲ್ಲಿ 15 -16 ದಿನಗಳು ಜೂನ್ ಜುಲೈನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಅಗಸ್ಟ್ ಕೂಡ ಮುಗಿಯುವ ಹಂತದಲ್ಲಿದ್ದು ಶಾಲಾರಂಭವಾದಾಗಿನಿಂದ ಬಿಸಿಯೂಟ ನೌಕರರಿಗೆ ವೇತನವೇ ಸಿಕ್ಕಿಲ್ಲ.
ಬಿಸಿಯೂಟ ನೌಕರರು ತಮ್ಮ ಬಾಕಿ ವೇತನ ಪಾವತಿಗಾಗಿ ಬೆಂಗಳೂರಿನಲ್ಲಿ ಧರಣಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಕೆಲಸವನ್ನೇ ನಂಬಿಕೊಂಡಿದ್ದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯ 1.18 ಲಕ್ಷ ಅಕ್ಷರ ದಾಸೋಹದ ನೌಕರರು ತೊಂದರೆ ಅನುಭವಿಸುವಂತಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕುಂದಾಪುರ ಅಡುಗೆ ಸಿಬ್ಬಂದಿ ಸಂಘದ ಸಿಂಗಾರಿ ಪೂಜಾರ್ತಿ ಅವರು, ನಾವು ಎಪ್ರಿಲ್ ನಲ್ಲಿ 10 ದಿನ ಹಾಗೂ ಮೇ ಯಲ್ಲಿ 12ರಿಂದ ಕೆಲಸ ಮಾಡಿದ್ದೇವೆ. ಜೂನ್, ಜುಲೈ ಪೂರ್ತಿ ಕೆಲಸ ಮಾಡಿದ್ದು, ಆಗಸ್ಟ್ ಆದರೂ ಈವರೆಗೆ ವೇತನ ಕೊಟ್ಟಿಲ್ಲ, ಸರಕಾರ ದಯವಿಟ್ಟು ವೇತವನ್ನು ಪ್ರತೀ ತಿಂಗಳು ನೀಡುವಂತಾಗಲಿ, ತಿಂಗಳ 5ನೇ ತಾರೀಕು ಬಿಡಿ, ಪ್ರತೀ ತಿಂಗಳ 10ರೊಳಗೆ ಆದರೂ ಕೊಡುವ ಕೆಲಸವನ್ನು ಮಾಡಲಿ. ನಾವು ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಹೀಗೆ ಆದರೆ ತುಂಬಾ ಕಷ್ಟವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ನಡುವೆ ಶಾಲೆಗಳ ಬಿಸಿಯೂಟ ಸಿಬ್ಬಂದಿಗಳಿಗೆ ಕನಿಷ್ಟ ವೇತನದ ಅರ್ಧದಷ್ಟು ವೇತನ ನೀಡಬೇಕು ಎಂದು ಮಾಹಿತಿ ಸೇವಾ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿರುವ ಮಾಹಿತಿ ಸೇವಾ ಸಮಿತಿ ಆಲ್ ಇಂಡಿಯಾ ಎನ್.ಜಿ.ಒ ದ ಉಪಾಧ್ಯಕ್ಷ ಗೋಪಾಲಯ್ಯ ಅಪ್ಪು ಕೋಟೆಯಾರ್ ಅವರು, ಉಚ್ಚ ನ್ಯಾಯಾಲಯದ ಪ್ರಕಾರ 9 ಗಂಟೆ ಕೆಲಸ ಮಾಡುವರಿಗೆ ಮಾತ್ರ ಕನಿಷ್ಠ ವೇತನ ಕೊಡುದಕ್ಕೆ ಸಾಧ್ಯ. ಹಾಗಾದರೆ 4 ಗಂಟೆ ಕೆಲಸ ಮಾಡುವ ಬಿಸಿಯೂಟ ಕೆಲಸಗಾರರು ಕನಿಷ್ಠ ವೇತನದ ಅರ್ಧದ ಪಟ್ಟಿಗೆ ಹಕ್ಕುದಾರರು ಆಗುತ್ತಾರೆ. ಒಬ್ಬ ಕಾರ್ಮಿಕ 9 ಗಂಟೆ ಕೆಲಸ ಮಾಡುವಾಗ 1 ಗಂಟೆ ಅವನ ಯಾ ಅವಳ ಕಾಪಿ, ಮತ್ತು ಊಟದ, ಸಮಯ ಕೊಡ ಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಕಾನೂನು ಹೇಳುತ್ತದೆ. ಆದುದರಿಂದ ಬಿಸಿಯೂಟ ಸಿಬ್ಬಂದಿ ಮಹಿಳೆಯರು 4 ಗಂಟೆ ಕೆಲಸಮಾಡುವಾಗ ಅವರಿಗೆ ಕನಿಷ್ಠ ವೇತನದ ಅರ್ದಪಟ್ಟು ಅಂದರೆ ಶೇ. 50 ರಷ್ಟು ನೀಡಬೇಕು. ಆ ಪ್ರಕಾರಣ ವೇತನ ರೂ. 6,625 ಅದರ ಜೊತೆಗೆ ಕಾರ್ಮಿಕ ಬಿಮಾ ಯೋಜನೆ, ಭವಿಷ್ಯ ನಿದಿ ಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಹಾಗೂ ನಮ್ಮ ದೇಶದಲ್ಲಿ ಜನಪ್ರತಿನಿಧಿಗಳಿಗೆ ಅವರು ಕೆಲಸ ಮಾಡದೆ ಅವರಿಗೆ ಲಕ್ಷದಲ್ಲೇ ಸಂಬಳ ಹಾಗೂ ಅವರ ಇತರ ಸೌಲಭ್ಯಗಳನ್ನು ನಮ್ಮ ತೆರಿಗೆಯ ಹಣದಿಂದ ನೀಡಲಾಗುತ್ತದೆ. ಹಾಗೆ ಅವರು ಭ್ರಷ್ಟಾಚಾರ ಗುರುಗಳಾಗಿ ನಮ್ಮ ಬಡ ಜನರ ಜೀವನವನ್ನು ಲೂಟಿ ಮಾಡುತ್ತಾರೆ. ಆದರೆ ನಮ್ಮ ನ್ಯಾಯಾಲಯ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡೋದಿಲ್ಲ. ಈ ಬಡ ಮಹಿಳೆಯರ ಹೊಟ್ಟೆಗೆ ಹೊಡೆಯಬೇಡಿ. ಅವರು ಕೂಡ ಮಾನವರು. ಅವರಿಗೂ ಬದುಕುವ ಹಕ್ಕು ನಮ್ಮ ದೇಶದಲ್ಲಿ ಇದೆ. ಅವರ ಹಕ್ಕಿಗೆ ವಂಚನೆ ಮಾಡುವುದು ನಿಜವಾದ ಮೋಸ. ಆದ್ದರಿಂದ ನ್ಯಾಯಾಲಯ ಕೊಟ್ಟ ಆದೇಶವನ್ನು ಹಿಂಪಡೆದು, ಈ ಬಡ ಮಹಿಳೆಯರಿಗೆ ನ್ಯಾಯಕೊಡಬೇಕು. ಈ ಬೇಡಿಕೆಯನ್ನು ಸರಕಾರವು ಕೂಡಲೆ ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧ್ಯಾಹ್ನ ಬಿಸಿಯೂಟ ಯೋಜನೆ ಬೆಂಗಳೂರು ಇದರ ಜಂಟಿ ನಿರ್ದೇಶಕ ನಾರಾಯಣ ಗೌಡ ಅವರು ಬಿಸಿಯೂಟ ನೌಕರರ ಖಾತೆಗೆ ನೇರವಾಗಿ ಹಣ ಹಾಕುವಂತಹ (ಡಿಬಿಟಿ- ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್‍ಫರ್) ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಎಲ್ಲರ ಆಧಾರ್ ಸಹಿತ ದಾಖಲೆ ಜೋಡಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪ್ರವಿಳಂಬವಾಗಿದೆ. ಶೀಘ್ರ ಖಾತೆಗೆ ಗೌರವ ಧನ ಜಮೆಯಾಗಲಿದೆ. ಮೇ ತಿಂಗಳ ಪಾವತಿ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬಾಕಿಯದ್ದು ಸಾವತಿಯಾಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಹೊಸ ಆದೇಶದಂತೆ ಶೈಕ್ಷಣಿಕ ಸಾಲಿನಲ್ಲಿ ಅಡುಗೆ ತಯಾರಿಕೆಗೆ ಮಾಸಿಕ 3700 ಹಾಗೂ ಸಹಾಯಕರಿಗೆ 3600 ಗೌರವ ಧನ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 1,866 ಹಾಗೂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3213 ಹೊಂದಿ ಸೇರಿದಂತೆ ಒಟ್ಟು ಉಭಯ ಜಿಲ್ಲೆಗಳಲ್ಲಿ 5,79 ಮಂದಿ ಅಕ್ಷರ ದಾಸೋಹ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇನ್ನು ರಾಜ್ಯದಲ್ಲಿ 71,336 ಮಂದಿ ಅಡುಗೆ ಸಹಾಯಕರು ಸೇರಿ ಒಟ್ಟು 1,18,586 ಮಂದಿ ಅಡುಗೆ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ.