ಆರೋಗ್ಯಕರ ಆಹಾರ ಕ್ರಮ ಮತ್ತು ದೇಹದ ತೂಕ ನಿಯಂತ್ರಣ ಮಾಹಿತಿ ಕಾರ್ಯಾಗಾರ
ಉಡುಪಿ: ಚೈತನ್ಯ ಫೌಂಡೇಶನ್ ಮತ್ತು ಡಾ. ಅನು ಆಯುರ್ವೇದ ಕ್ಲಿನಿಕ್ ಇದರ ಆಶ್ರಯದಲ್ಲಿ ಆರೋಗ್ಯಕರ ಆಹಾರ ಕ್ರಮ ಮತ್ತು ದೇಹದ ತೂಕ ನಿಯಂತ್ರಣ ಮಾಹಿತಿ ಕಾರ್ಯಾಗಾರ ಅಂಬಲಪಾಡಿ ಮೆಂಡನ್ಸ್ ಗಿರಿಜಾ ಸಂಕೀರ್ಣದಲ್ಲಿ ನಡೆಯಿತು.
ಚೈತನ್ಯ ಫೌಂಡೇಶನ್ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿನ ಜೀವನ ಶೈಲಿಯಲ್ಲಿ ನಿಯಮಿತ ಆಹಾರ ಪದ್ದತಿಯ ಅಗತ್ಯತೆಯ ಬಗ್ಗೆ ತಿಳಿಸಿದರು.
ಡಾ. ಅನು ಆಯುರ್ವೇದ ಕ್ಲಿನಿಕ್ ನ ಪಂಚಕರ್ಮ ಆಯುರ್ವೆದ ವೈದ್ಯೆ ಡಾ.ಅಂಜಲಿ ಆರ್. ಕೆ. ಅವರು ಮಾಹಿತಿ ಕಾರ್ಯಗಾರದಲ್ಲಿ ಮಾತಾನಾಡುತ್ತಾ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ನಮ್ಮ ಅಸಮತೋಲನ ಮತ್ತು ಅನಿಯಮಿತ ಆಹಾರ ಪದ್ದತಿ ಕಾರಣವಾಗಿರುತ್ತದೆ. ನಿಯಮಿತ ಆಹಾರ ಸೇವನೆ ಮತ್ತು ಸಮತೋಲನ ಪೌಷ್ಟಿಕ ಆಹಾರ ಸೇವನೆಯಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮತ್ತು ದೇಹದ ತೂಕ ನಿಯಂತ್ರಣ ಸಾಧ್ಯವೆಂದರು.ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಒಂದು ವಾರಗಳ ಉಚಿತ ಯೋಗ ತರಬೇತಿ ನಡೆಸಿಕೊಟ್ಟ ಡಾ.ಅಮ್ರೀನ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಡಾ.ಅಶೋಕ್ ಎಚ್, ಮಧುಮೇಹ ತಜ್ಞೆ ಡಾ, ಶೃತಿ ಬಳ್ಳಾಲ್, ನ್ಯಾಯವಾದಿ ನಿಶ್ಮಿತಾ ಸನಿಲ್, ಸಾಧನಾ ಕಿಣಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷದ ಅಧ್ಯಕ್ಷ್ ರಮೇಶ್ ಶೆಟ್ಟಿ, ಡಾ.ಅನು ಡೆಂಟಲ್ ಕೇರ್ ದಂತ ವೈದ್ಯೆ ಡಾ.ಅನುಪಮಾ ಸುನೀಲ್, ರವಿರಾಜ್ ನಾಯಕ್, ಕೆನರಾ ಬ್ಯಾಂಕ್ ಕಡೆಕಾರು ಶಾಖಾ ಪ್ರಬಂಧಕಿ ಶ್ವೇತಾ, ಜೋಸೆಫ್ ಜಿ. ಎಮ್.ರೆಬೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
ನೀಲಾವತಿ ಎ, ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.