ಮಾದಕ ವಸ್ತು ಸೇವನೆ: ಬೈಂದೂರು, ಕಾರ್ಕಳ, ಗಂಗೊಳ್ಳಿಯ 6 ಮಂದಿ ವಶಕ್ಕೆ

ಉಡುಪಿ ಆ.28 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಬೈಂದೂರು ಪೊಲೀಸರು  ಶಿರೂರು ಕರಾವಳಿಯ ಸಮುದ್ರ ಕಿನಾರೆ ಬಳಿ ಶರತ್ ಪೂಜಾರಿ(20), ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಬಳಿ  ವಿಧ್ಯಾಧರ (19) ಎಂಬಾತನನ್ನು ಹಾಗೂ ಕಾರ್ಕಳ ಪೊಲೀಸರು ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ಮಹಮದ್‌ ರಫೀಕ್‌ (36)ಎಂಬಾತನನ್ನು ಮತ್ತು ಗಂಗೊಳ್ಳಿ ಪೊಲೀಸರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ಬೀಚ್‌ ನಲ್ಲಿ ಮೊಹಮ್ಮದ್ ರಿಹಾಬ್‌ ಸಾದಾ, ಮೊಹಮ್ಮದ್‌ ದಾನಿಶ್‌, ಮೊಹಮ್ಮದ್‌ ಅರ್ಬಾಜ್‌ ಎಂಬ ಮೂವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. 

ವೈದ್ಯರು ನೀಡಿದ ಈ 6 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಎರಡು, ಕಾರ್ಕಳ ಮತ್ತು ಗಂಗೊಳ್ಳಿ ಠಾಣೆಯಲ್ಲಿ ತಲಾ ಒಂದು ಸೇರಿ ಒಟ್ಟು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!