ಅನಧಿಕೃತ ಶೆಡ್ ತೆರವು- ಕರ್ತವ್ಯಕ್ಕೆ ಅಡ್ಡಿ ಕೃಷ್ಣಮೂರ್ತಿ ಆಚಾರ್ಯ ಸಹಿತ ಹಲವರ ವಿರುದ್ದ ಪ್ರಕರಣ ದಾಖಲು
ಮಲ್ಪೆ: ಕಿನ್ನಿಮುಲ್ಕಿಯಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತ ಶೆಡ್ ತೆರವು ವೇಳೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಹಾಗೂ ಇತರರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್ ಎನ್ ಪ್ರಭು ದೂರು ನೀಡಿದ್ದು, ಪೌರಾಯುಕ್ತರ ಸೂಚನೆಯಂತೆ ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿ ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಶೆಡ್ ತೆರವುಗೊಳಿಸಲು ಇತರ ಸಿಬಂದಿಗಳೊಂದಿಗೆ ಜೆಸಿಬಿ ಸಹಿತ ತೆರಳಿದ್ದ ವೇಳೆ ಕೃಷ್ಣಮೂರ್ತಿ ಆಚಾರ್ಯ ಹಾಗೂ ಆಟೋ ಚಾಲಕರು ಹಾಗೂ ಇತರರು ಶೆಡ್ ತೆರವುಗೊಳಿಸುವ ಸಂದರ್ಭದಲ್ಲಿ ಅಡ್ಡಿ ಪಡಿಸಿದ್ದು. ಪೊಲೀಸರ ಸಹಾಯದಿಂದ ನಾವು ತೆರವು ಕಾರ್ಯಚರಣೆ ಮುಗಿಸಿ ಸರಕಾರಿ ವಾಹನದಲ್ಲಿ ವಾಪಾಸಲಾಗಲು ತೆರಳುತ್ತಿದ್ದ ವೇಳೆ ಕೃಷ್ಣಮೂರ್ತಿ ಆಚಾರ್ಯ ಹಾಗೂ ಅವರ ಬೆಂಬಲಿಗರು 15-20 ಜನ ಸೇರಿಕೊಂಡು ವಾಹನವನ್ನು ಸುತ್ತುವರಿದು ನಮ್ಮನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.