ಕಾಪು: ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ವ್ಯಕ್ತಿ ನಾಪತ್ತೆ

ಉಡುಪಿ ಆ.27 (ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂಬುದಾಗಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪುವಿನ ಎರ್ಮಾಳ್ ನಿವಾಸಿ ಚೇತನ್‌ ಕುಮಾರ್‌ (32) ನಾಪತ್ತೆಯಾದವರು. ಇವರು ತಮಗಿದ್ದ ಆರೋಗ್ಯ ಸಮಸ್ಯೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆ.24 ರಂದು ಚಿಕಿತ್ಸೆ ಪಡೆದುಕೊಂಡು ರಿಕ್ಷಾದಲ್ಲಿ ಮನೆಗೆ ಬರುತ್ತಿದ್ದವರು ಉಡುಪಿ ಸಿಟಿ ಬಸ್‌ ನಿಲ್ದಾಣದ ಸಮೀಪ ರಿಕ್ಷಾದಿಂದ ಇಳಿದು ಬಸ್‌ ನಿಲ್ದಾಣದ ಕಡೆಗೆ ಹೋದವರು ಈವರೆಗೂ ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. ಇವರು ಮೊಬೈಲ್‌ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬುದಾಗಿ ಚೇತನ್ ಕುಮಾರ್ ಅವರ ಅತ್ನಿ ಪೂಜಾ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!