ಮಾದಕ ವಸ್ತು ಸೇವನೆ: ಕುಕ್ಕಿಕಟ್ಟೆ, ಮಂಚಿಕೆರೆ ಹಾಗೂ ಕಾಪುವಿನ ಯುವಕರು ವಶಕ್ಕೆ

ಉಡುಪಿ, ಆ.27 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಹಾಗೂ ಉಡುಪಿ ಠಾಣೆಯಲ್ಲಿ ಮತ್ತೆ ಮೂರು ಪ್ರಕರಣ ದಾಖಲಾಗಿದೆ.

ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಟೋಲ್ ಗೇಟ್ ಸಮೀಪ ಪಡುಬಿದ್ರೆ ಪೊಲೀಸರು ಪ್ರಜ್ವಲ್ ಆಚಾರ್ಯ ಎಂಬಾತನನ್ನು ಹಾಗೂ ಉಡುಪಿಯ ಕುಕ್ಕಿಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಾದಿಕ್ ಮತ್ತು ಮಂಚಿಕೆರೆ ಸಮೀಪದ ದುಗ್ಗಿಪದವು ಬಳಿ ಜಗದೀಶ್ ಎಂಬಾತನನ್ನು ಉಡುಪಿ ಪೊಲೀಸರು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಈ ಮೂವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ಒಂದು ಹಾಗೂ ಉಡುಪಿ ಠಾಣೆಯಲ್ಲಿ ಎರಡು ಸೇರಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!