ಉಡುಪಿ: ಚಿನ್ನಾಭರಣ ಪರಿಶೀಲನೆಗೆ ಹೋದ ಬ್ಯಾಂಕ್ ಉದ್ಯೋಗಿ ನಾಪತ್ತೆ
ಕಾಪು ಆ.26 (ಉಡುಪಿ ಟೈಮ್ಸ್ ವರದಿ): ಶಿರ್ವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಕ್ಲರ್ಕ್ ಹರಿಪ್ರಸಾದ್ ಎಂಬವರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ.
ಉಡುಪಿ ಶಿರಿಬೀಡು ನಿವಾಸಿ ಹರಿಪ್ರಸಾದ್ (31) ಅವರು ಶಿರ್ವ ಶಾಖೆಯಿಂದ ಕಾಪು ಶಾಖೆಯಲ್ಲಿ ಅಡವಿಟ್ಟ ಚಿನ್ನಾಭರಣ ಪರಿಶೀಲನೆಗಾಗಿ ಹೋಗುವುದಾಗಿ ತಿಳಿಸಿ ಹೋದವರು ಬಳಿಕ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಸಂಜೆ 7 ಗಂಟೆಗೆ ವೇಳೆ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಬಂದಿದ್ದು, ಮೊಬೈಲ್ ಲೊಕೇಶನ್ ಮಂಗಳೂರಿನ ಸಿಟಿ ಸೆಂಟರ್ ಎಂದು ತೋರಿಸುತ್ತಿದೆ ಎಂಬುದಾಗಿ ಹರಿಪ್ರಸಾದ್ ಅವರ ಪತ್ನಿ ಮಹಿಮಾ ಜಿ. ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.