ಹಾವಂಜೆ: ಹೊಮ್ ಗಾರ್ಡ್ ಕೃಷ್ಣ ಶೆಟ್ಟಿ ನಿಧನ
ಹಾವಂಜೆ ಗ್ರಾಮದ ಕೀಳಂಜೆಯ ನಿವಾಸಿ, ಹೊಮ್ ಗಾರ್ಡ್ ಆಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕೃಷ್ಣ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯಂದಿಂದ ಆ.24 ರಂದು ನಿಧನರಾಗಿದ್ದಾರೆ.
ಅವರಿಗೆ 79 ವರ್ಷ ವಯಸ್ಸಾಗಿತ್ತು, ಮೃತರು ಮೂರು ಪುತ್ರ, ಒಂದು ಪುತ್ರಿಯನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಕೃಷ್ಣ ಶೆಟ್ಟಿ ಅವರು ಅಪ್ಪಟ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು.
ನಿವೃತ್ತರಾಗಿ ನಂತರ ಉಡುಪಿ ಹೆಬ್ಬಾರ್ ಹೋಂ ಗಾರ್ಡ್ ಸರ್ವಿಸ್, ಮಣೆಪಾಲದ ಕೆ.ಎಮ್.ಸಿ ಯಲ್ಲಿಯೂ ಭದ್ರತಾ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿ, ಸ್ಥಳೀಯವಾಗಿ ಕೃಷಿ ಚಟುವಟಿಕೆಗಳಲ್ಲಿ ಸೈನಿಸಿಕೊಂಡಿದ್ದರು.