ಉಡುಪಿ ಯುವ ಮೆಕ್ಯಾನಿಕ್ ಹೃದಯಾಘಾತದಿಂದ ಸಾವು: ಪತ್ನಿ, 20 ದಿನಗಳ ಮಗುವನ್ನು ತಿರಸ್ಕರಿಸಿದ ಕುಟುಂಬ

ಉಡುಪಿ: ಹಲವಾರು ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಾದಾಮಿ ಮೂಲದ 28ವರ್ಷದ ಅಯ್ಯಪ್ಪ ಎಂಬವರು ಇಂದು ಹಠಾತ್ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಸಾಂತ್ವನ ಹೇಳಬೇಕಾದ ಕುಟುಂಬಸ್ಥರು ಮೃತನ ಪತ್ನಿ ಹಾಗೂ 20 ದಿನಗಳ ಮಗುವನ್ನು ತಿರಸ್ಕರಿಸುವ ಮೂಲಕ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.

ಅಯ್ಯಪ್ಪ ಅವರು ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ಮದುವೆಗೆ ಎರಡೂ ಕಡೆಯಿಂದಲೂ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಹೀಗಾಗಿ ಅಯ್ಯಪ್ಪ ಅವರು ನಿಧನರಾದ ಸುದ್ದಿಯನ್ನು ಅವರ ಮನೆಯವರಿಗೆ ತಿಳಿಸಿದಾಗ ಮೃತದೇಹವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ.

ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳಕ್ಕೆ ಧಾವಿಸಿ ಮೃತನ ಪತ್ನಿ ಹಾಗೂ ಆಕೆಯ 20 ದಿನಗಳ ಮಗುವನ್ನು ಉಡುಪಿಯ ಸಖಿ ಸೆಂಟರ್‌ಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಅಯ್ಯಪ್ಪ ಅವರ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಬಾದಾಮಿಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!