ಗಾಂಜಾ ಸೇವನೆ- ಮಲ್ಪೆ, ಪಡುಬಿದ್ರೆ, ಕೋಟ ಮಣಿಪಾಲ ಹಾಗೂ ಶಿರ್ವಾದಲ್ಲಿ 9 ಮಂದಿ ವಶಕ್ಕೆ
ಉಡುಪಿ ಆ.25 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಮತ್ತೆ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾದಕ ವಸ್ತು ಗಾಂಜಾ ಸೇವಿಸಿರುವ ಅನುಮಾನದ ಮೆರೆಗೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಕಲ್ಮಾಡಿ ಜಂಕ್ಷನ್ ಬಳಿ ನಿಯಾಜ್ ಅಹಮ್ಮದ್, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಕಂಚಿನಡ್ಕ ಸುಬ್ಬಪ್ಪನ ಕಾಡು ಎಂಬಲ್ಲಿ ಮೊಹಮ್ಮದ್ ತೌಫೀಕ್ ಯಾನೆ ತೌಸೀಫ್, ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ 92ನೇ ಹೇರೂರು ಬಳಿ ಸಚ್ಚಿನ್ (27), ಅಲ್ವಿನ್ ಅಲ್ಮೇಡಾ (27), ಶಿವಪ್ರಸಾದ (26) ನಬಿಲ್ ಸಾಮ್ಯ (26) ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಬಾಳೆಬೆಟ್ಟು ಬಸ್‍ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿತಿನ್ ಆಚಾರಿ (31), ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದ ಶೀಂಬ್ರಾ ಪ್ರಗತಿ ನಗರದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಾಗೇಶ ಮಡಿವಾಳ (29), ತನ್ಸಿಲ್ (26) ಎಂಬ 9 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ 9 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಲ್ಪೆ, ಪಡುಬಿದ್ರೆ, ಕೋಟ ಠಾಣೆಯಲ್ಲಿ ತಲಾ ಒಂದು ಮಣಿಪಾಲ ಠಾಣೆಯಲ್ಲಿ 2 ಹಾಗೂ ಶಿರ್ವಾ ಠಾಣೆಯಲ್ಲಿ 4 ಸೇರಿ ಒಟ್ಟು 9 ಪ್ರತ್ಯೇಕ ಪ್ರಕರಣ ದಾಖಲಾಗಿದೆ.