ಉಡುಪಿ: ಅಗ್ನಿವೀರ್ ಸೇವೆಗೆ ಮಹಿಳೆಯರಿಗೆ ಆನ್ಲೈನ್ ಅರ್ಜಿ
ಉಡುಪಿ ಆ.24(ಉಡುಪಿ ಟೈಮ್ಸ್ ವರದಿ): ಭಾರತೀಯ ಶಸ್ತ್ರ ಸೇನೆಯ ಅಗ್ನಿವೀರ್ ಜನರಲ್ ಡ್ಯೂಟಿ ಸೇವೆಗೆ ಸೇರಲು ಇಚ್ಚಿಸುವ ಮಹಿಳೆಯರಿಗೆ ಆನ್ಲೈನ್ ಮೂಲಕ ಅರ್ಜಿಯನ್ನ ಆಹ್ವಾನಿಸಲಾಗಿದೆ.
ಅಗ್ನಿವೀರ್ ಸೇವೆಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು:
ಎತ್ತರ 162 ಸೆಂ.ಮೀಟರ್
ವಯೋಮಿತಿ 17.5 ರಿಂದ 23 ವರ್ಷಗಳು
ಎಸ್ ಎಸ್ ಎಲ್ ಸಿ ಯಲ್ಲಿ 45 ಶೇ. ಅಂಕದೊಂದಿಗೆ ಉತ್ತೀರ್ಣರಾಗಿರಬೇಕು
ಸೇವಾವಧಿ 4 ವರ್ಷಗಳು
ದೈಹಿಕ ಸಾಮರ್ಥ್ಯ ಪರೀಕ್ಷೆಗಳು
1.6 ಕಿಮಿ ಓಟ-7ನಿಮಿಷ 30 ಸೆಕೆಂಡ್ ಗಳು (ಗ್ರೂಪ್l)
8 ನಿಮಿಷ (ಗ್ರೂಪ್ II)
ಉದ್ದ ಜಿಗಿತ 10 ಫೀಟ್, ಎತ್ತರ ಜಿಗಿತ 3 ಫೀಟ್
ಸೇವಾ ಸೌಲಭ್ಯಗಳು:
ವೇತನ ವಾರ್ಷಿಕ 4.76 ರಿಂದ 6.92 ಲಕ್ಷ
ಸೇವಾ ನಿಧಿ ಹಣ 11.76 ಲಕ್ಷ
12 ನೇ ತರಗತಿ ಪ್ರಮಾಣ ಪತ್ರ
ಅಗ್ನಿವೀರ ಕೌಶಲ್ಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7 ಕೊನೆ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಕಾಪುವಿನ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಅಥವಾ ಮೊ.ಸಂಖ್ಯೆ 8073679442 ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.