ಲಾಸ್ಟ್ ಬೆಂಚ್ ಪೋಸ್ಟರ್ ಮತ್ತು ಪ್ರಮೋಷನ್ ಹಾಡು ಬಿಡುಗಡೆ
ಮಂಗಳೂರು: ಎ.ಎಸ್.ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾದ ಪೋಸ್ಟರ್ ಮತ್ತು ಹಾಡಿನ ಬಿಡುಗಡೆ ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಜರಗಿತು.
ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಲಾಸ್ಟ್ ಬೆಂಚ್ ಸಿನಿಮಾದ ಪೋಸ್ಟರ್ ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ತಯಾರಾದ ದೊಡ್ಡ ಬಜೆಟ್ ನ ಸಿನಿಮಾ ಇದು. ಕೋಸ್ಟಲ್ ವುಡ್ ನ ಖ್ಯಾತ ನಾಮರ ಜೊತೆಗೆ ಮೂವರು ನಾಯಕರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಸಿನಿಮಾವನ್ನು ಅಕ್ಟೋಬರ್ ನಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಅವರು ಶುಭ ಹಾರೈಸಿದರು.
ಸಮಾರಂಭದಲ್ಲಿ ಪೃಥ್ವಿ ಅಂಬಾರ್, ವಿಸ್ಮಯ ವಿನಾಯಕ್, ಈಸ್ಟರ್ ನೊರೊನ್ಹಾ, ದೀಪಕ್ ಪೂಜಾರಿ, ಸಂದೀಪ್ ಮಲಾನಿ, ಲಕ್ಷ್ಮಣ್ ಕುಂದರ್, ಕಿಶನ್ ಇಕ್ಲಿಕ್ಕ್, ಇಲ್ಯಾಸ್ ಅಕ್ತರ್, ಕಿಶೋರ್ ಬೊಯ್ಸ್ ಜೊನ್, ಅಶಿಕ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಿನಿಮಾಕ್ಕೆ ಒಂದೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬಾರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್, ಅಥರ್ವ ಪ್ರಕಾಶ್ ಪಾಂಡೇಶ್ವರ್, ಸಚಿನ್ ಮಾಡ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ರವಿ ರಾಮಕುಂಜ, ಪ್ರವೀಣ್ ಮರ್ಕಮೆ, ಆರಾಧ್ಯ ಶೆಟ್ಟಿ, ನಿರಿಕ್ಷಾ ಶೆಟ್ಟಿ ಪುತ್ತೂರು, ರೂಪ ವರ್ಕಾಡಿ, ಅನಿತಾ, ಐಸಿರಿ ಜೈನ್, ಪ್ರಾರ್ಥನಾ ಸುವರ್ಣ, ಮೊದಲಾದ ಬಹು ತಾರಾಗಣ ಈ ಸಿನಿಮಾದಲ್ಲಿದೆ. ತುಳು ಸಿನಿಮಾರಂಗದ ಖ್ಯಾತ ನಾಮ ಕಲಾವಿದರಾದ ಪೃಥ್ವಿ ಅಂಬಾರ್, ರೂಪೇಶ್ ಶೆಟ್ಟಿ, ವಿನಿತ್ ಕುಮಾರ್ ಮೊದಲಾದವರು ಈ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಯಾಗಿದೆ.
ಮಲ್ಟಿ ಸ್ಟಾರ್ಸ್ ಕಲಾವಿದರ ಜೊತೆಗೆ ಹಾಸ್ಯ ಕಲಾವಿದರ ದೊಡ್ಡ ದಂಡೇ ಈ ಸಿನಿಮಾದಲ್ಲಿ ಇದೆ. ಹೀಗಾಗಿ ನಗುವಿಗೆ ಬರವಿಲ್ಲ. ಅಲ್ಲದೆ ಹೊಸ ಕಲಾವಿದರಿಗೂ ಅಭಿನಯಿಸಲು ನಿರ್ದೇಶಕರು ಅವಕಾಶ ಮಾಡಿ ಕೊಟ್ಟಿದ್ದಾರೆ. ಪ್ರಧಾನ್ ಎಂಪಿ ನಿರ್ದೇಶನದ ಸಿನಿಮಾಕ್ಕೆ ಕೀರ್ತನ್ ಭಂಡಾರಿ ಮತ್ತು ಸೃಜನ್ ಪೇಜಾವರ್ ಕತೆ-ಸಾಹಿತ್ಯ- ಸಂಭಾಷಣೆ ರಚಿಸಿದ್ದಾರೆ. ಸಹ ನಿರ್ದೇಶಕರಾಗಿ ರಜು ಬಿಲಿಗಿರಿ, ಆನಂದ್, ಸುಮನ್ ಸುವರ್ಣ, ಹರೀಶ್, ಪವನ್ ಫಿಕ್ಸಾಟ್೯, ಡೆನ್ಸನ್ ಪಿಂಟೋ, ಇದ್ದಾರೆ. ಕ್ಯಾಮರಾ ನಿರಂಜನ್ ದಾಸ್ ನೃತ್ಯ ಸಂಯೋಜನೆ ಪ್ರಸಣ್ಣ ಕುಮಾರ್ ಮತ್ತು ವಿನಾಯಕ ಆಚಾರ್ಯ, ಸಂಕಲನದ ಜವಾಬ್ದಾರಿಯನ್ನು ಸಚಿನ್ ವಹಿಸಿಕೊಂಡಿದ್ದಾರೆ. ಪ್ರಚಾರ ಕಲೆ : ದೀಕ್ಷನ್ ಆಚಾರ್ಯ ಚರಣ್ ಜೋಗಿ, ಪವನ್ ಐಲೋ, ಪ್ರೊಡಕ್ಷನ್ ಮ್ಯಾನೇಜರ್ : ರಾಜೇಶ್ ಕುಡ್ಲ, ಪ್ರಚಾರ : ಬಾಳ ಜಗನ್ನಾಥ ಶೆಟ್ಟಿ.
ಈ ಸಿನಿಮಾದಲ್ಲಿ 5 ಹಾಡುಗಳಿವೆ. ಸಿನಿಮಾಕ್ಕೆ ವಿನ್ಯಾಸ್ ಮದ್ಯ ರಾಗ ಸಂಯೋಜಿಸಿ ಸಂಗೀತ ನೀಡಿದ್ದಾರೆ. ನಿಹಾಲ್ ತಾವ್ರೋ, ಭೋಜರಾಜ ವಾಮಂಜೂರು, ಕೀರ್ತನ್ ಹೊಳ್ಳ, ದೀಪಕ್ ಕೋಡಿಕಲ್, ಸೃಜನ್ ಕುಮಾರ್ ತೋನ್ಸೆ ಈ ಸಿನಿಮಾಕ್ಕಾಗಿ ಹಾಡಿದ್ದಾರೆ. ಈ ಸಿನಿಮಾಕ್ಕೆ ಅಶಿಕಾ ಸುವರ್ಣ ನಿರ್ಮಾಪಕರಾಗಿದ್ದು, ಕಿರಣ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ಕಿಶೋರ್ ಬೊಯ್ಸ್ ಜೊನ್ ಮತ್ತು ಮುರಳಿ ಫಿಕ್ಸಾಟ್೯ ಕಾರ್ಯಕಾರಿ ನಿರ್ಮಾಪಕರಾಗಿರುತ್ತಾರೆ.
ಕಥಾಹಂದರ: ವಿಐಪೀಸ್ ಲಾಸ್ಟ್ ಬೆಂಚ್ ತುಳುವಿನ ಮೊದಲ ಬಹು ನಾಯಕರಿರುವ ಸಿನಿಮಾ ಆಗಿದೆ. ಇದು ಮೂರು ಬೇಜವಾಬ್ದಾರಿ ಹುಡುಗರ ಕಾಲೇಜು ಜೀವನದ ಕಥೆಯನ್ನು ಹೊಂದಿದೆ. ಸಿನಿಮಾ ಒಂದೊಂದೇ ತಿರುವುಗಳನ್ನು ಪಡೆದು ಪ್ರೇಕ್ಷಕರಿಗೆ ಕುತೂಹಲವನ್ನುಂಟು ಮಾಡುತ್ತದೆ. ಈ ಸಿನಿಮಾವು ಹಾಸ್ಯ ಪ್ರಧಾನವಾಗಿದ್ದರೂ ಸೆಂಟಿಮೆಂಟಲ್ ಕಥೆಯನ್ನೂ ಹೊಂದಿದೆ. ಒಂದು ಕಥೆ ಹಾಸ್ಯದ ಹೊನಲು, ಮತ್ತೊಂದು ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವಾಗಿರುವ ಈ ಕಥೆಯಲ್ಲಿ ಪ್ರೇಕ್ಷಕರಿಗೆ ಹೊಟ್ಟೆ ತುಂಬಾ ನಗಾಡಲು ಯಥೇಚ್ಛ ಅವಕಾಶಗಳಿವೆ. ಕೋಸ್ಟಲ್‌ವುಡ್‌ನ ಖ್ಯಾತನಾಮ ಕಲಾವಿದರೆಲ್ಲರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಏಕ ಕಾಲಕ್ಕೆ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಲಾಸ್ಟ್ ಬೆಂಚ್ ಚಿತ್ರ ತೆರೆಕಾಣಲಿದೆ.