ಉಡುಪಿ ಗಾಂಜಾ ಸೇವನೆ ಪ್ರಕರಣ: ಮತ್ತೆ ದಾಳಿ, 5 ಮಂದಿ ವಶಕ್ಕೆ
ಶಿರ್ವಾ ಆ.24 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ದಿನೇ ದಿನೇ ಹೆಚ್ಚಾದಂತೆ ಕಾಣುತ್ತಿದೆ. ಇದೀಗ ಮಣಿಪಾಲ, ಕಾಪು, ಶಿರ್ವ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಿಶಿತ್ ಶಿವಕುಮಾರ್ ವಡ್ಡೆಪಳ್ಳಿ (21), ನಕುಲ್ ಪೆÇನ್ನಪ್ಪ (21), ಅನುರಾಗ್ ಕುಮಾರ್ (20) , ಮಹಮ್ಮದ್ ಅಫ್ರಾಜ್ (19) ,ತುಫೇಲ್ (19) ಪೊಲೀಸರು ವಶಕ್ಕೆ ಪಡೆದವರು.
ಆ.22 ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜಶೇಖರ್ ವಂದಲಿ ಅವರು ಇತರ ಸಿಬ್ಬದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಮಣಿಪಾಲದ ಆರ್.ಟಿ.ಓ ಕಛೇರಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರತ್ನ ನಗರದ ನಿವಾಸಿಯಾದ ತೆಲಂಗಾಣ ಮೂಲದ ರಿಶಿತ್ ಶಿವಕುಮಾರ್ ವಡ್ಡೆಪಳ್ಳಿ (21), ಮಣಿಪಾಲ ಕಾಯಿನ್ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೊಡಗು ಜಿಲ್ಲೆಯ ನಕುಲ್ ಪೊನ್ನಪ್ಪ (21), ಈಶ್ವರ ನಗರ ನಿವಾಸಿ ಬಿಹಾರ ಮೂಲದ ಅನುರಾಗ್ ಕುಮಾರ್ (20) ಎಂಬ ಮೂವರನ್ನು ಹಾಗೂ ಕಾಪು ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಮುರಗೋಡ ಅವರು ಇತರ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಉಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್ ಬಳಿ ಶಿರ್ವಾದ ಮಹಮ್ಮದ್ ಅಫ್ರಾಜ್ (19) ನನ್ನು ಮತ್ತು ಶಿರ್ವ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಅವರು ಬೆಳಪು ಗ್ರಾಮದ ಪಣಿಯೂರು ಬಳಿ ಮೂಳೂರಿನ ತುಫೇಲ್ (19) ಎಂಬಾತನನ್ನು ಸೇರಿ ಒಟ್ಟು ಐದು ಮಂದಿಯನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಈ 5 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಐವರ ವಿರುದ್ಧ ಮಣಿಪಾಲ, ಕಾಪು ಹಾಗೂ ಶಿರ್ವ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.