ಕೊಡವೂರು: 60 ಮಾತ್ರೆ ಸೇವಿಸಿ ಅಸ್ವಸ್ಥಗೊಂಡ ಮಹಿಳೆ ಮೃತ್ಯು

ಮಲ್ಪೆ ಆ.23 (ಉಡುಪಿ ಟೈಮ್ಸ್ ವರದಿ): ಕೊಡವೂರು ಗ್ರಾಮದ ಮೂಡಬೆಟ್ಟುವಿನ ಶ್ರೀಕೃಷ್ಣ ವೃದ್ದರ ಆಶ್ರಯ ಧಾಮದಲ್ಲಿದ್ದ ಮಹಿಳೆಯೊಬ್ಬರು 60 ಬಿಪಿ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ.

61 ವರ್ಷದ ಶೈಲಜಾ ಎಸ್. ಮೃತಪಟ್ಟವರು. ಇವರು 2021 ರ ನ.1 ರಂದು ಆಶ್ರಮಕ್ಕೆ ಸೇರಿಕೊಂಡಿದ್ದರು. ಆ.17 ರಂದು ಅಸ್ವಸ್ಥಗೊಂಡಿದ್ದ ಶೈಲಜಾ ಎಸ್ ರವರು ಯಾವುದೋ ಮಾತ್ರೆ ಸೇವಿಸಿದ ಬಗ್ಗೆ ಅನುಮಾನ ಗೊಂಡು ವೃದ್ದಾಶ್ರಮದ ಶ್ರೀಕೃಷ್ಣಮೂರ್ತಿ ಎಂಬವರು ಉಡುಪಿ ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಅವರು  60 ಬಿ.ಪಿ ಮಾತ್ರೆಗಳನ್ನು ಸೇವಿಸಿರುವುದಾಗಿ ತಿಳಿದು ಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆ. 22 ರಂದು ಮೃತಪಟ್ಟಿದ್ದಾರೆ ಎಂದು ಶ್ರೀಕೃಷ್ಣಮೂರ್ತಿ ಎಂಬವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!