ಕಾಂಗ್ರೆಸ್ ಘೋಷಿಸಿದ್ದ ಆ.26 ರ ‘ಮಡಿಕೇರಿ ಚಲೊ’ ಮುಂದೂಡಿಕೆ

ಮಡಿಕೇರಿ: ಕೊಡಗು ಜಿಲ್ಲಾಡಳಿತ ಹೇರಿರುವ ನಿಷೇಧಾಜ್ಞೆಯಿಂದಾಗಿ ಆಗಸ್ಟ್ 26 ರಂದು ಕೈಗೊಳ್ಳಬೇಕಿದ್ದ ‘ಮಡಿಕೇರಿ ಚಲೊ’ವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಕಾರಣ ಇಲ್ಲದೇ ನಿಷೇಧಾಜ್ಞೆ ಜಾರಿಗೊಳಿಸಿರುವುದು ಅಸಂವಿಧಾನಾತ್ಮಕ ನಡೆ ಎಂದು ಟೀಕಿಸಿದ ಅವರು ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆಯುವಂತಹ ಕೃತ್ಯ ಜರುಗಲು ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದ ಜಿಲ್ಲಾಡಳಿತ ಈಗ ನಿಷೇಧಾಜ್ಞೆ ತರುವ ಮೂಲಕ ಮತ್ತೊಮ್ಮೆ ತಪ್ಪೆಸಗಿದೆ. ನಿಷೇಧಾಜ್ಞೆ ಮುಗಿದ ಬಳಿಕ ‘ಮಡಿಕೇರಿ ಚಲೊ’ ದಿನಾಂಕ ಪ್ರಕಟಿಸಲಾಗುವುದು ಎಂದರು‌.”

Leave a Reply

Your email address will not be published. Required fields are marked *

error: Content is protected !!