ಮಣಿಪಾಲ: ಕೋವಿಡ್ ಸೋಂಕಿತನ ಮೃತ ದೇಹ ನಾಪತ್ತೆ, ಜಿಲ್ಲಾಧಿಕಾರಿ ಸ್ಪಷ್ಟನೆ

ಉಡುಪಿ: ಮಣಿಪಾಲ ಆಸ್ಪತ್ರೆಯ ಶವಗಾರದಿಂದ ಕೋರೋನ ಸೋಂಕಿತ ವ್ಯಕ್ತಿಯ ಮೃತದೇಹ ಕಣ್ಮರೆ, ‘ಉಡುಪಿ ಟೈಮ್ಸ್’ ನಲ್ಲಿ ಪ್ರಕಟವಾದ ವರದಿಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಸದರಿ ಮೃತದೇಹವನ್ನು ಕೋವಿಡ್ ನಿಯಮದ ಪ್ರಕಾರ ವಿಲೇವಾರಿ ಮಾಡಲಾಗಿದೆ, ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರೊರ್ವರ ಮೃತ ದೇಹ ಕಣ್ಮರೆ ಮಾಹಿತಿ ಪಡೆದ ನಮ್ಮ ವರದಿಗಾರ ಸ್ಥಳಕ್ಕೆ ಹೋಗಿ ಕುಟುಂಬದವರು ನೀಡಿದ ಮಾಹಿತಿಯಂತೆ ಸುದ್ದಿ ಪ್ರಕಟಿಸಲಾಗಿತ್ತು. ಸ್ಥಳದಲ್ಲಿದ್ದ ಮೃತರ ಸಹೋದರ ಮತ್ತು ಸಹೋದರರ ಮಗನ ಹೇಳಿಕೆಯಂತೆ ‘ಉಡುಪಿ ಟೈಮ್ಸ್’ ವರದಿ ಬಿತ್ತರಿಸಿದೆ.

ಕಾರ್ಕಳ ಅಜೆಕಾರ್ ನಿವಾಸಿ, ವಿಜಯ ಬ್ಯಾಂಕ್ ನಿವೃತ್ತ ಡಿಜಿಎಮ್ ಕೋವಿಡ್ ಸೋಂಕಿನಿಂದ ಮೃತ ಪಟ್ಟ ನಂತರ ನಡೆದ ಘಟನೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದ್ದು, ಬಿಜೆಪಿ ಮುಖಂಡನ ಪತ್ನಿ ರಕ್ಷಾ ಸಂಶಯಾಸ್ಪದ ಸಾವು ಮತ್ತು ಕುಂದಾಪುರ ನೇರಂಬಳ್ಳಿಯ ಕೋವಿಡ್ ಸೋಂಕಿತನ ಮೃತ ದೇಹ ಅದಲುಬದಲಾದ ಘಟನೆ ಮಾಸುವ ಮುನ್ನವೇ ಸೋಮವಾರ ಈ ಪ್ರಕರಣ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಮೃತ ದೇಹ ಕಣ್ಮರೆ ಪ್ರಕರಣದ ಬಗ್ಗೆ ಮಣಿಪಾಲ ಆಸ್ಪತ್ರೆಯ ವೈದ್ಯರ ಹೇಳಿಕೆ, ಮೃತರ ಸಹೋದರನ ಮಗನ ಹೇಳಿಕೆ ಜಿಲ್ಲೆಯ ಜನರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದೆ.

ಈ ಬಗ್ಗೆ ಮಣಿಪಾಲ ಆಸ್ಪತ್ರೆಯ ಪ್ರಾಧ್ಯಾಪಕ, ಮೃತ ಬಾಲಕೃಷ್ಣ ಶೆಟ್ಟಿಯವರ ಸಂಬಂಧಿ ಡಾ. ಪದ್ಮರಾಜ್ ಹೆಗ್ಡೆ ಉಡುಪಿ ಟೈಮ್ಸ್ ಗೆ ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.


ಕೆ.ಬಾಲಕೃಷ್ಣ ಶೆಟ್ಟಿ ನನ್ನ ಮಾವ, ಅವರ ಅನಾರೋಗ್ಯದ ಸಮಯದಲ್ಲಿ, ನಾನು ಅವರನ್ನು ನೋಡಿಕೊಳ್ಳುತ್ತಿದ್ದೆ. ಆ. 23 ರಂದು ಸಂಜೆ 5 ಗಂಟೆಗೆ ನನ್ನ ಚಿಕ್ಕಪ್ಪನಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ನಾನು ಅವರನ್ನು ನೋಡಿಕೊಳ್ಳುತ್ತಿದ್ದವರಿಂದ ಕರೆ ಸ್ವೀಕರಿಸಿದೆ. ತಕ್ಷಣ ನಾನು ಕೆಎಂಸಿಯಿಂದ ಆಂಬ್ಯುಲೆನ್ಸ್ ಕಳುಹಿಸಿ ಅವರನ್ನು ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿಕೊಳ್ಳಲಾಹಿತು. ಅವರಿಗೆ ತಕ್ಷಣ ಇಂಟುಬೆಟ್ ಮಾಡಲಾಯಿತು. ಚಿಕಿತ್ಸೆ ನೀಡುವ ವೈದ್ಯರೊಂದಿಗೆ ನಾನು ವಿಚಾರಿಸಿದಾಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂತು. ಮಧ್ಯರಾತ್ರಿ ಅವರಿಗೆ ಕೋವಿಡ್ 19 ನಿಂದ ಸೋಂಕಿತರಾಗಿದ್ದರೆ ಎಂದು ಕರೆ ಬಂತು. ದುರದೃಷ್ಟವಶಾತ್ ಇಂದು ಬೆಳಿಗ್ಗೆ ೫ ಗಂಟೆಗೆ ನಾವು ಅವರನ್ನು ಕಳೆದುಕೊಂಡೆವು.

ಬೆಳಿಗ್ಗೆ 11 ಗಂಟೆಗೆ ನಾನು ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ಕರೆ ಬಂತು ಆ ಸಂದರ್ಭದಲ್ಲಿ ನಾನು ಅವರಿಗೆ ಶವಸಂಸ್ಕಾರಕ್ಕಾಗಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ತಿಳಿಸಿದೆ.

ಸಂಜೆ ಪ್ರೀತೇಶ್ ಶೆಟ್ಟಿ ನನಗೆ ಕರೆ ಮಾಡಿ ಕಠಿಣ ಮತ್ತು ನಿಂದನೀಯ ಸ್ವರದಿಂದ, ನನನ್ನು ಸಮಾಲೋಚಿಸದೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾ ಅರೋಗ್ಯ ಅಧಿಕಾರಿಗಳಿಗೆ ನಾನು ಯಾಕೆ ಒಪ್ಪಿಗೆ ನೀಡಿದ್ದೇನೆ ಎಂದು ಕೇಳಿದರು. ಈ ವ್ಯಕ್ತಿಯ ಬಗ್ಗೆ ಮತ್ತು ನನ್ನ ಚಿಕ್ಕಪ್ಪನೊಂದಿಗಿನ ಸಂಬಂಧದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆಸ್ಪತ್ರೆಯು ಸುಮಾರು ರೂ. 3 ಲಕ್ಷದ ಬಿಲ್ ಮಾಡಿದೆ ಎಂಬ ಆಪಾದನೆ ಸಂಪೂರ್ಣವಾಗಿ ಸುಳ್ಳು, ವಿಮಾ ಕಂಪನಿಯು ಬಿಲ್ಲಿನ ಭಾಗಶಃ ಮೊತ್ತ ನೀಡಿದೆ. ಆಸ್ಪತ್ರೆಯು ಸರಕಾರಿ ಮಾನದಂಡದ ಪ್ರಕಾರವೇ ಎಲ್ಲವನ್ನು ನಿರ್ವಹಿಸಿದೆ ಮತ್ತು ರೋಗಿಯ ಜೊತೆಗೆ ನಾನಲ್ಲದೆ ಬೇರೆ ಯಾರು ಆಸ್ಪತ್ರೆಗೆ ಬಂದಿರಲಿಲ್ಲ.

.

Leave a Reply

Your email address will not be published. Required fields are marked *

error: Content is protected !!