ಕೊರೋನಾ ಹೆಸರಿನಲ್ಲಿ ಜನರ ಜೀವದೊಂದಿಗೆ ಚೆಲ್ಲಾಟ: ಯೋಗಿಶ್ ಶೆಟ್ಟಿ
ಉಡುಪಿ: ಹಲವು ತಿಂಗಳುಗಳಿಂದ ಕೊರೋನ ವಿಶ್ವದಾದ್ಯಂತ ತಾಂಡವಾಡುತ್ತಿದೆ. ಕೊರೋನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಹಾಗೂ ಬೇರೆ ಬೇರೆ ರೀತಿಯ ದಬ್ಬಾಳಿಕೆ ನಡೆಸುತ್ತಿರುವುದು ನಿರಂತರವಾಗಿ ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ಮೂಲತಃ ಕಾಪು ಪಡು ಗ್ರಾಮದ ನಿವಾಸಿ ರಕ್ಷಾರವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ನೇರವಾಗಿ ಆರೋಪಿಸುತ್ತಿದ್ದಾರೆ. ಇದನ್ನು ಮುಚ್ಚಿ ಹಾಕಲು ಕೊರೋನಾ ಪಾಸಿಟಿವ್ ಎಂಬ ವರದಿಯನ್ನು ನೀಡಲಾಗಿದೆ ಎಂಬುದು ಕುಟುಂಬಸ್ಥರ ಆರೋಪ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಕೂಡಲೇ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥ ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಹಾಗೂ ಕುಟುಂಬಕ್ಕೆ ಅತಿ ಹೆಚ್ಚಿನ ಪರಿಹಾರ ನೀಡಬೇಕು,ಮತ್ತು ಮುಂದಿನ ದಿನಗಳಲ್ಲಿ ಯಾರಿಗೂ ಈ ತರಹ ಅನ್ಯಾಯವಾಗ ಬಾರದಾಗಿ ಮತ್ತು ಜನರು ಈಗಾಗಲೇ ಕೋರೋನ ದಿಂದಾಗಿ ಭಯಭೀತರಾಗಿದ್ದ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಾಗಿ ಆಗ್ರಹಿವಿಸಿರುತ್ತಾರೆ. ಕುಂದಾಪುರದಲ್ಲಿ ವೃದ್ಧನ ಶವದ ಬದಲು ಯುವಕನ ಶವವನ್ನು ರುದ್ರಭೂಮಿಗೆ ಕಳುಹಿಸಿ ಅದರಲ್ಲೂ ಗೊಂದಲ ಸೃಷ್ಟಿಸಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ವೈಫಲ್ಯತೆಯನ್ನು ಮುಚ್ಚಿ ಹಾಕಲು ಕೊರೋನಾ ಹೆಸರಿನಲ್ಲಿ ಜನರನ್ನು ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಇದು ಈ ಕೂಡಲೇ ನಿಲ್ಲಬೇಕಾಗಿದೆ. ಹಾಗೂ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಗಮನಕ್ಕೆ ಬಂದಲ್ಲಿ ಅದಕ್ಕೆ ತಕ್ಕ ಉತ್ತರ ನೀಡಲು ಸಮರ್ಥರಾಗಿದ್ದೇವೆ. ಅದಕ್ಕೆ ಆಸ್ಪದ ನೀಡದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಉಡುಪಿ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕೆಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿಯವರು ಆಗ್ರಹಿಸಿರುತ್ತಾರೆ. |