ಕೊರೋನಾದಿಂದ ಮೃತರಾದ ದೇಹವನ್ನೇ ಬದಲಿಸಿ ನೀಡಿದ ಉಡುಪಿ ಜಿಲಾಸ್ಪತ್ರೆ!
ಕುಂದಾಪುರ: (ಉಡುಪಿ ಟೈಮ್ಸ್ ವರದಿ)ಕೊವೀಡ್ ಸೋಂಕಿನಿಂದ ಮೃತಪಟ್ಟ 60 ವರ್ಷದ ವ್ಯಕ್ತಿಯ ಮೃತ ದೇಹದ ಬದಲಿಗೆ ಯುವಕನ ಮೃತ ದೇಹ ಕಳುಹಿಸಿದ ಉಡುಪಿ ಜಿಲಾಸ್ಪತ್ರೆ ಸಿಬ್ಬಂದಿಗಳು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ರವಿವಾರ ಕೋಟೇಶ್ವರ ಹಳೆಕೋಟೆ ರುದ್ರಭೂಮಿಯಲ್ಲಿ ನಡೆದಿದೆ.
ನೆರಂಬಳ್ಳಿಯ 60 ವರ್ಷದ ವ್ಯಕ್ತಿಯೊರ್ವರು ಶನಿವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಅವರ ಮೃತ ದೇಹ ಆರೋಗ್ಯ ಇಲಾಖೆಯ ನಿರ್ದೆಶನದಂತೆ ಅಂತ್ಯಕ್ರಿಯೆ ನಡೆಸಲು ಹಿಂದೂ ರುದ್ರ ಭೂಮಿಗೆ ತಂದ ಸಂದರ್ಭ ಅಜ್ಜರಕಾಡು ಆಸ್ಪತ್ರೆಯ ಎಡವಟ್ಟು ಬಯಲಿಗೆ ಬಂದಿದೆ.
ಇಂದು ಬೆಳಿಗ್ಗೆ ಮೃತ ದೇಹ ತಂದಾಗ ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ನೀಡಿದಾಗ, ವಿಷಯ ತಿಳಿದು ಸ್ಥಳೀಯರೆಲ್ಲ ಪ್ರತಿಭಟನೆ ನಡೆಸಿದಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮೃತದೇಹ ಇನ್ನೊಂದು ಆಂಬ್ಯುಲೆನ್ಸ್ ನಲ್ಲಿ ಬರುತ್ತಿದೆಂದು ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.
ಕಾರ್ಕಳ ಕುಂಟ್ಪಾಡಿಯ ಪ್ರಕಾಶ್ (40) ಎನ್ನುವವರು ಜಾಂಡಿಸ್ ಕಾಯಿಲೆಗೆ ತುತ್ತಾಗಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತರಾಗಿದ್ದ ಇವರ ಮೃತ ದೇಹ ಶವಗಾರದಲ್ಲಿತ್ತು, ಅದೇ ರೀತಿ ಮಣಿಪಾಲ ಆಸ್ಪತ್ರೆಯವರ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೇ ಕೊರೋನಾ ಸೋಂಕಿನಿಂದ ಮೃತರಾದ ನೇರಂಬಳ್ಳಿಯ ಗಂಗಾಧರ್ ಆಚಾರ್ಯ ಮೃತ ದೇಹವೂ ಅಜ್ಜರಕಾಡು ಆಸ್ಪತ್ರೆಯ ಶವಗಾರದಲ್ಲಿತ್ತು. ಇಂದು ಬೆಳಿಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಮೃತ ದೇಹ ಅದಲು ಬದಲು ನೀಡಿದ್ದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Concerned dept Officers should take immediate action for the incident, so that in the future days such negligence not happen.
How can they Keep body of Covid patient and normal patients body together in same Mortuary. Doesn’t it spread virus?
Dead bodies don’t spread virus. Once a covid patient dies, the body is cleaned with hypochloride acid and wrapped properly.
It is better to cover the dead body with transparent plastic drape,this will avoid the confusion and spreading of Virus too.