ಕೊರೋನಾ ಸೋಂಕಿದ್ದರೂ ಪರವಾಗಿಲ್ಲ, ನನಗೆ ನನ್ನ ಪತ್ನಿಯ ಮೃತ ದೇಹ ನೀಡಿ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊರೋನಾ ಸೋಂಕಿದ್ದರೂ ಪರವಾಗಿಲ್ಲ, ನನಗೆ ನನ್ನ ಪತ್ನಿಯ ಮೃತ ದೇಹ ನೀಡಿ, ಎಂದು ಹನ್ನೆರಡು ವರ್ಷ ಪ್ರೀತಿಸಿ, ನಾಲ್ಕು ವರ್ಷದ ಹಿಂದೆ ಮದುವೆಯಾಗಿ ಸಂಸಾರ ಮಾಡಿ, ಪತ್ನಿಯನ್ನು ಕಳಕೊಂಡ ಯುವಕನೊರ್ವನ ಆಳಲು.
ಇದು ಶನಿವಾರ ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದ ಎದುರು ಕೇಳಿ ಬಂದ ಆರ್ತನಾದ, ಅಲ್ಲಿದ್ದ ಎಂತವರ ಹೃದಯವು ಕರಗುವಂತಾಗಿತ್ತು. ಶುಕ್ರವಾರ ಇಂದಿರಾನಗರ ನಿವಾಸಿ, ಶಿವಪ್ರಸಾದ್ ಪತ್ನಿ ಶ್ರೀರಕ್ಷಾ(26) ತಲೆ ನೋವಿಗೆ ವೈದ್ಯರು ನೀಡಿದ ಇಂಜೆಕ್ಷನ್ ಎಡವಟ್ಟಿನಿಂದಾಗಿ ಮೃತಪಟ್ಟಿದ್ದರು. ಪ್ರಕರಣ ಮುಚ್ಚಿ ಹಾಕಲು ಮಹಿಳೆಗೆ ಕೊರೋನಾ ಪಾಸಿಟಿವ್ ಇದೆಂದು ವರದಿ ಬಂದಿದ್ದು, ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ವಿವರ: ಆ.21 ರಂದು ಶಿವಪ್ರಸಾದ್ ಪತ್ನಿ ಶ್ರೀರಕ್ಷಾ ವಾಂತಿ ಮತ್ತು ವಿಪರೀತ ತಲೆ ನೋವಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಆಗ ಅಲ್ಲಿನ ವೈದ್ಯರು ಚುಚ್ಚು ಮದ್ದು ನೀಡಿ ಮನೆಗೆ ಕಳುಹಿಸಿದ್ದರು. ಮನೆಗೆ ಹೋದ ಶ್ರೀರಕ್ಷ ನಿದ್ದೆಗೆ ಜಾರಿದ್ದರು. ನಂತರ ಮನೆಯವರು ನೋಡುವಾಗ ಬಾಯಿಲ್ಲಿ ನೊರೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿನ ಸಿಬ್ಬಂದಿಗಳು ನಮಗೆ ತಿಳಿದಿಲ್ಲ ಯಾವ ಚುಚ್ಚು ಮದ್ದು ನೀಡಿದ್ದಾರೆಂದು ಹೇಳಿದ್ದರು. ತಕ್ಷಣ ಅವರು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿದಾಗ ಮಹಿಳೆ ಮೃತ ಪಟ್ಟಿದ್ದಾಗಿ ತಿಳಿಸಿದ್ದಾರೆ.
ಪತಿಯಿಂದ ನಗರ ಠಾಣೆಯಲ್ಲಿ ದೂರು: ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ನನ್ನ ಪತ್ನಿ ಮೃತ ಪಟ್ಟಿರುವ ಸಂಶಯದ ಬಗ್ಗೆ ದೂರು ನೀಡಿದ್ದರು. ರಾತ್ರೋ ರಾತ್ರಿ ಶಾಸಕರು ನನಗೆ ಫೋನ್ ಮಾಡಿ ಪತ್ನಿಗೆ ಕೊರೋನಾ ಪಾಸಿಟಿವ್ ಇದೆ ಎಂದು ಹೇಳಿದ್ದು, ವರದಿ ಬರುವ ಮೊದಲೇ ಇವರಿಗೆ ಕೊರೋನಾ ಪಾಸಿಟಿವ್ ಇದೆ ಎಂದು ಹೇಗೆ ತಿಳಿಯುತ್ತದೆಂದು ಶಿವಪ್ರಸಾದ್ ಶವಗಾರ ಎದುರು ಜಿಲ್ಲಾಸ್ಪತ್ರೆಯ ವೈದ್ಯರನ್ನು ಪ್ರಶ್ನಿಸಿದ್ದಾರೆ.
ಜಿಲ್ಲಾಸ್ಪತ್ರೆಯಿಂದಲೂ ಎಡವಟ್ಟು: ಮೃತ ಮಹಿಳೆಯ ಕೊರೋನಾ ಪರೀಕ್ಷೆಗಾಗಿ ಆ.21 ರಂದು ಸ್ಯಾಂಪಲ್ ಕಳುಹಿಸಿದ್ದು, ಬಂದ ಪಾಸಿಟಿವ್ ವರದಿಯಲ್ಲಿ ಆ. 20 ರಂದು ಸ್ಯಾಂಪಲ್ ಕಳುಹಿಸಿದ್ದಾಗಿತ್ತು. ಮಾತ್ರವಲ್ಲದೆ ಆಸ್ಪತ್ರೆ ನೀಡಿದ ವರದಿ ಪ್ರತಿಯಲ್ಲಿ ಯಾವುದೇ ವೈದ್ಯರ ಸಹಿಯಾಗಲಿ, ಸೀಲ್ ಕೂಡ ಇರಲಿಲ್ಲ, ವರದಿಯನ್ನು ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ನೀಡಿದ್ದರು. ಇದು ಪ್ರತಿಭಟನೆಯಲ್ಲಿ ಸೇರಿದ್ದ ನೂರಕ್ಕೂ ಹೆಚ್ಚೂ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಮತ್ತೆ ವೈದ್ಯರ ಸೀಲ್, ಸಹಿ ಇರುವ ವರದಿ ಹೊರ ಬಂತು.
ಮಧ್ಯಾಹ್ನ ನಂತರ ಸ್ಥಳಕ್ಕೆ ಬಂದ ಸ್ಥಳೀಯ ನಗರ ಸಭಾ ಸದಸ್ಯರನ್ನೂ ತರಾಟೆಗೆ ತೆಗೆದುಕೊಂಡ ಸ್ಥಳೀಯರು. ನಾವು ಚುನಾವಣೆ ಸಂದರ್ಭ ನಿಮ್ಮ ಪರವಾಗಿ ಕೆಲಸ ಮಾಡಲು ಬೇಕು, ನಮ್ಮ ಕಷ್ಟದ ಸಮಯಕ್ಕೆ ನೀವು ಯಾವುದೇ ಸಹಕಾರ ನೀಡದೆ ಇರುತ್ತಿರಿ, ಇದಕ್ಕಾಗಿ ನಿಮ್ಮನ್ನು ಗೆಲ್ಲಿಸಿದ್ದ ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಬಂದ ಶಾಸಕ ಕೆ. ರಘುಪತಿನ ಭಟ್: ಪ್ರತಿಭಟನಾಕಾರರು ಮೃತ ದೇಹ ನೀಡುವಂತೆ ಪಟ್ಟು ಹಿಡಿದಿದ್ದರು, ಕೊರೋನಾ ಪಾಸಿಟಿವ್ ಇರುವ ಮೃತ ದೇಹ ಸರಕಾರ ನಿಯಮದಂತೆ ಮನೆಯವರಿಗೆ ನೀಡುವಂತಿಲ್ಲ, ಆರೋಗ್ಯ ಇಲಾಖೆ ನಿರ್ದೇಶನದಂತೆ ಅಂತ್ಯ ಕ್ರಿಯೆ ನಡೆಯುತ್ತದೆ. ಮೃತ ಮಹಿಳೆಯ ಕುಟುಂಬಿಕರು, ಸ್ಥಳೀಯರು ತೀವೃ ಒತ್ತಡ ಹಾಕಿದ ಪರಿಣಾಮ ಶಾಸಕರ ಸೂಚನೆಯಂತೆ ಐದು ಪಿಪಿ ಕಿಟ್ ನೀಡಿ ಮೃತ ದೇಹ ಹಸ್ತಾಂತರಿಸಲಾಯಿತು.
ಶಾಸಕರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಒಂದು ಹಂತದಲ್ಲಿ ಸಂಯಮ ಕಳೆದು ಕೊಂಡ ಪ್ರತಿಭಟನಾಕಾರರು ಕೊರೋನಾ ದಂಧೆಯಲ್ಲಿ ಆರೋಗ್ಯ ಇಲಾಖೆ ಹಣ ಮಾಡುತ್ತಿದ್ದೆ, ಬೇರೆ ಯಾವ ರೀತಿ ಸತ್ತರೂ ಕೊರೋನಾ ಹಣೆ ಪಟ್ಟಿಕಟ್ಟಿ ಲಕ್ಷಾಂತರ ರೂ ದೊಚುತ್ತಿದ್ದಾರೆ, ಇವರು ಮೃತ ದೇಹ ಇಟ್ಟು ಹಣ ಮಾಡುವ ಬದಲು ಯಾವುದಾದರೂ ದೇವಸ್ಥಾನದ ಎದರು ಭಿಕ್ಷೆ ಬೇಡಲಿ ಎಂದು ಶ್ರೀರಕ್ಷಾ ಪತಿ ಶಿವಪ್ರಸಾದ್ ಆಕ್ರೋಶದಲ್ಲಿ ನುಡಿದರು. ಶಾಸಕರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನ ಪಟ್ಟರೂ ಸಹನೆ ಕಳೆದು ಕೊಂಡು ಕೆಲವರು ಶಾಸಕರಿಗೂ ಇದರಲ್ಲಿ ಪಾಲು ಇದೆಯೇ ಎಂದು ಪ್ರಶ್ನಿಸಿದರು.
Investigation has to take by the concerned authorities, and the doubts of the incident should be come forward.
Investigation has to be taken by the concerned authorities, and the doubts of the incident should come forward.