ಕೊರೋನಾ ವಿರುದ್ಧದ ಸಮರದಲ್ಲಿ ಉಡುಪಿ ಸೋತಿದೆ: ದೇವಿಪ್ರಸಾದ್ ಶೆಟ್ಟಿ
ಉಡುಪಿ: ರಾಜ್ಯಾದ್ಯಂತ ಕೋವಿಡ್-19 ನಿಯಂತ್ರಣದಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ದಿಟ್ಟ ನಿರ್ಧಾರದಿಂದ ನಂ.1 ಸ್ಥಾನದಲ್ಲಿದೆ. ಆದರೆ ಇದೀಗ ಸರ್ಕಾರದ ಆತುರದ ನಿರ್ಧಾರ ಗಳಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ರೌದ್ರವತಾರದಿಂದ ಪ್ರತಿ ದಿನ ಏರುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಉಡುಪಿ ಜಿಲ್ಲೆ ಸೋತಿದೆಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ದೂರಿದ್ದಾರೆ. ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಮೂಲಕ ಜನ ತಮ್ಮ ರಕ್ಷಣೆಯಲ್ಲಿ ಜಾಗೃತರಾಗಿದ್ದಾರೆ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಅವರು ಜಂಟಿಯಾಗಿ ಜನ ಮೆಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಜನಪ್ರತಿನಿಧಿಗಳು ಮತ್ತು ಸರಕಾರದ ತಪ್ಪು ನಿರ್ಧಾರಗಳಿಂದ ಏಕಾಏಕಿ ಲಾಕ್‌ಡೌನ್ ಸಡಿಲಿಸಿ జನ ಮಾರುಕಟ್ಟೆಗಳಲ್ಲಿ, ಆಸ್ಪತ್ರೆಗಳಲ್ಲಿ, ರಸ್ತೆಗಳಲ್ಲಿ ಗುಂಪು ಗುಂಪಾಗಿ ಸಂಚರಿಸುವಂತಾಗಿದೆ. ಜನರ ಆಹಾರ ಮತ್ತು ಆರ್ಥಿಕ ಸಂಕಷ್ಟಗಳಿಂದ ಮೈಮರೆತು ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡುವಂತಾಗಿದೆ0ದು ಶೆಟ್ಟಿ ತಿಳಿಸಿದ್ದಾರೆ. ಕ್ಯಾರಂಟೈನ್ ಕೇಂದ್ರವೇ ಆತಂಕಕಾರಿ – ಹೊರರಾಜ್ಯ ಮತ್ತು ದೇಶಗಳಿಂದ ನಮ್ಮ ಬಂಧುಗಳನ್ನು ಬರ ಮಾಡಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಅವರನ್ನು ಇಲ್ಲಿ ನಡೆಸಿಕೊಂಡ ರೀತಿ ಮಾತ್ರ ಖಂಡನೀಯ. ಅವರನ್ನು ಕರೆಸಿದ ಮೊದಲು ಸರಕಾರ ಸರಿಯಾದ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಅವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆಯಿಲ್ಲ. ಪರೀಕ್ಷೆ ಪರಿಕರಗಳ ಕೊರತೆ, ವೈದ್ಯರುಗಳು ಕೊರತೆ ಹಾಗೂ ಮೇ 18 ಕ್ಕೆ ಬಂದ ನಮ್ಮವರ ಕ್ವಾರಂಟೈನ್ ಕೇಂದ್ರದಲ್ಲಿ ಇನ್ನೂ ಗಂಟಲು ದ್ರವ ಪರೀಕ್ಷಿಸಿಲ್ಲವೆಂಬ ದೂರು. ಇಲ್ಲೂ ಬಡವರಿಗೊಂದು ಶ್ರೀಮಂತ ರಿಗೊಂದು ಕಾನೂನು ರೂಪಿತವಾಗಿದೆನ್ನುತ್ತಾರೆ. ಕೆಲವೊಂದು ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿ, ವಸತಿ ಶಾಲೆಗಳಲ್ಲಿ ನಮ್ಮನ್ನು ಕೂಡಿ ಹಾಕಿದ್ದಾರೆ. 10 ದಿನಗಳಿಂದ ಒಂದೇ ಬೆಡ್ ಶೀಟ್ ಕೊಟ್ಟಿದ್ದಾರೆ. ಸರಿಯಾದ ಆಹಾರ ವ್ಯವಸ್ಥೆಯಿಲ್ಲ ವೆಂದು ನಮ್ಮ ಬಂಧುಗಳು ಕೂಗಾಡುತ್ತಿದ್ದರು. ಮಕ್ಕಳು, ಮಹಿಳೆಯರಿಗೆ ತೀರಾ ತೊಂದರೆಯಾಗಿದೆ. ಎಲ್ಲರೂ ಒಂದೇ ಕಡೆ ವಾಸಿಸುವುದರಿಂದ ಕೊರೊನಾ ಸೋಂಕಿತರಿಂದ ಹತ್ತಾರು ಕುಟುಂಬದ ನಾವೆಲ್ಲರೂ ಭಯಭೀತರಾಗಿದ್ದಾರೆ, ಆತ್ಮಹತ್ಯೆ ನಮಗೆ ದಾರಿ ಎನ್ನುತ್ತಿದ್ದಾರೆ. ಅವರನ್ನು ರಕ್ಷಿಸುವುದು ಜನಪ್ರತಿನಿಧಿಗಳ ಕರ್ತವ್ಯವೆಂದು ಶೆಟ್ಟಿ ತಿಳಿಸಿದ್ದಾರೆ. ಉಚಿತ ಬಸ್ ಜಿಲ್ಲೆಗೆ ವಿಸ್ತರಣೆಯಾಗಲಿ : ನಮಗಾಗಿ ಹಗಲಿರುಳು ದುಡಿದ ಪೊಲೀಸರು, ಅಧಿಕಾರಿಗಳಿಗೆ ಸೋಂಕು ದೃಢಪಟ್ಟಿದೆ. ಅವರಿಗೆ ಹೀಗಾದರೆ ನಮ್ಮಂತಹವರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಪರಿಸ್ಥಿತಿಯನ್ನು ಅವಲೋಕಿಸುತ್ತಿಲ್ಲ. ಉಚಿತ ಬಸ್‌ಗಳನ್ನು ಉಡುಪಿ ಶಾಸಕರು ವ್ಯಸ್ಥೆಗೊಳಿಸಿರುವುದು ಸ್ವಾಗತಾರ್ಹ ನಡೆ. ಇತರ ಕಡೆ ಜನ ಏನು ತಪ್ಪು ಮಾಡಿದ್ದಾರೆ. ಇಡೀ ಜಿಲ್ಲೆಗೆ ಉಚಿತ ಬಸ್ ವ್ಯವಸ್ಥೆ ಗೊಳಿಸಿ, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ. |