ಪರೇಶ್ ಮೇಸ್ತಾ ಕೊಲೆ ಆರೋಪಿಗೆ ನೀಡಲಾಗಿದ್ದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಸ್ಥಾನದ ಆದೇಶಕ್ಕೆ ತಡೆ

ಪರೇಶ್ ಮೇಸ್ತಾ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಮಾಲ್ ಆಜಾದ್ ಅಣ್ಣಿಗೇರಿ

ಕಾರವಾರ ಆ.13: ವ್ಯಾಪಕ ವಿರೋಧದ ಬಳಿಕ ಪರೇಶ್ ಮೇಸ್ತಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಮಾಲ್ ಆಜಾದ್ ಅಣ್ಣಿಗೇರಿಗೆ ನೀಡಲಾಗಿದ್ದ ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಸ್ಥಾನದ ಆದೇಶವನ್ನು ಸರಕಾರ ತಡೆ ಹಿಡಿದಿದೆ.

ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಜಮಾಲ್ ರನ್ನು ಆಯ್ಕೆ ಮಾಡಿ ರಾಜ್ಯ ವಕ್ಸ್ ಮಂಡಳಿಯು ಗುರುವಾರ ಆದೇಶಿಸಿತ್ತು. ಇದನ್ನು ಬಿಜೆಪಿ ಮುಖಂಡರು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಂದಿ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಈ ಭಾಗದ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಈ ಬಗ್ಗೆ ವ್ಯಾಪಕ ಖಂಡನೆ ಹಾಗೂ ಸ್ವತಃ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸರ್ಕಾರವು ನೇಮಕಾತಿಯನ್ನು ತಡೆ ಹಿಡಿದಿದೆ ಎಂದು ತಿಳಿದು ಬಂದಿದೆ. ಐದು ವರ್ಷಗಳ ಹಿಂದೆ 2017ರ ಡಿಸೆಂಬರ್ ನಲ್ಲಿ ನಡೆದ ಗಲಭೆಯ ಸಂದರ್ಭ, ಹೊನ್ನಾವರದಲ್ಲಿ ಪರೇಶ ಮೇಸ್ತ ಅವರ ಕೊಲೆಯಾಗಿತ್ತು. ಈ ಪ್ರಕರಣವು ಭಾರಿ ಸಂಚಲನ ಉಂಟು ಮಾಡಿತ್ತು. 

Leave a Reply

Your email address will not be published. Required fields are marked *

error: Content is protected !!