ಉದ್ಯಮ ನಡೆಸಲು ಮನೆ ಬಾಡಿಗೆ ಪಡೆದವರಿಗೆ ಶೇ.18ರಷ್ಟು ಜಿಎಸ್ ಟಿ- ಕೇಂದ್ರ ಸ್ಪಷ್ಟನೆ

ನವದೆಹಲಿ: ಮನೆ ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ. 18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ.

ಬಾಡಿಗೆದಾರರು ಈಗ ಮನೆ ಬಾಡಿಗೆಯ ಮೇಲೆ ಶೇಕಡಾ 18 ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸಬೇಕಾಗುತ್ತದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕ್ಕರ್, ಇದು ದಾರಿತಪ್ಪಿಸುವಂತಹ ವರದಿ ಎಂದು ಹೇಳಿದೆ. ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಅದಕ್ಕೆ ಯಾವುದೇ ಜಿಎಸ್ ಟಿ ಅನ್ವಯಿಸೋದಿಲ್ಲ. ಹಾಗೆಯೇ ಮಾಲೀಕ ಅಥವಾ ಆ ಸಂಸ್ಥೆಯ ಪಾಲುದಾರ ಮನೆಯನ್ನು ವೈಯಕ್ತಿಕ ಬಳಕೆಗೆ ನೀಡಿದ್ರೆ ಆಗ ಕೂಡ ಯಾವುದೇ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ.

ಮನೆ ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ.18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ. ಇಲ್ಲಿಯ ತನಕ ವಾಣಿಜ್ಯ ಕಟ್ಟಡಗಳು ಅಂದ್ರೆ ಕಚೇರಿ ಅಥವಾ ಚಿಲ್ಲರೆ ಮಾರಾಟದ ಸ್ಥಳಗಳನ್ನು ಬಾಡಿಗೆಗೆ ನೀಡಿದ್ರೆ ಮಾತ್ರ ಅದಕ್ಕೆ ಜಿಎಸ್ ಟಿ ಅನ್ವಯಿಸುತ್ತಿತ್ತು. ಆದರೆ, ಜುಲೈ 18ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್ ಟಿ ನಿಯಮಗಳ ಪ್ರಕಾರ ಜಿಎಸ್ ಟಿ ನೋಂದಾಯಿತ ಬಾಡಿಗೆದಾರ ಒಂದು ನಿವಾಸ (ಮನೆ) ಬಾಡಿಗೆ ಪಡೆದರೆ ಶೇ.18ರಷ್ಟು ಸರಕು ಹಾಗೂ ಸೇವಾ ತೆರಿಗೆ ಪಾವತಿಸಬೇಕು.

Leave a Reply

Your email address will not be published. Required fields are marked *

error: Content is protected !!