ತೈಲ ಬೆಲೆ ಕುಸಿತದಿಂದ ಒಐಎಲ್‌ಗೆ ನಷ್ಟ, ಪೆಟ್ರೋಲ್ ಬೆಲೆ ಏರಿಕೆಯಿಂದ ಹೆಚ್ಚುತ್ತಿದೆ ಜನಾಕ್ರೋಶ!
ನವದೆಹಲಿ: ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಒಡೆತನದ ತೈಲ ಮತ್ತು ಅನಿಲ ಉತ್ಪಾದಕ ಆಯಿಲ್ ಇಂಡಿಯಾ ಲಿಮಿಟೆಡ್(ಒಐಎಲ್) ಕಂಪನಿ ಇತಿಹಾಸದಲ್ಲಿ ಎರಡನೇ ಬಾರಿಗೆ ನಷ್ಟ ಅನುಭವಿಸಿದೆ.
ಕಚ್ಚಾ ತೈಲ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾದ ನಂತರ ಆಯಿಲ್ ಇಂಡಿಯಾ ಲಿಮಿಟೆಡ್ ಎರಡನೇ ಬಾರಿಗೆ ನಷ್ಟ ಕಂಡಿದೆ. ಹಿಂದಿನ ಅವಧಿಗೆ ಇದೇ ಅವಧಿಯಲ್ಲಿ 624.80 ಕೋಟಿರೂಪಾಯಿ ನಿವ್ವಳ ಲಾಭಗಳಿಸಿತ್ತು.
2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 248 ಕೋಟಿರೂಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಇದು ಒಐಎಲ್ ಇತಿಹಾಸದಲ್ಲೇ ಎರಡನೇ ತ್ರೈಮಾಸಿಕ ನಷ್ಟವಾಗಿದೆ ಎಂದು ಒಐಎಲ್ ಹಣಕಾಸು ನಿರ್ದೇಶಕರು ಹೇಳಿದ್ದಾರೆ.
ಪೆಟ್ರೋಲ್ ಬೆಲೆ ನಿರಂತರ ಏರಿಕೆ, ಹೆಚ್ಚುತ್ತಿರುವ ಜನಾಕ್ರೋಶ
ತೈಲ ಕಂಪನಿಗಳು ಕಳೆದ ಆರು ದಿನಗಳಿಂದ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿವೆ. ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, 17ರಂದು 16 ಪೈಸೆ, 18ರಂದು 17 ಪೈಸೆ, 20ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ಪೈಸೆ, 21ರಂದು 19 ಪೈಸೆ, ಇಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 16 ಪೈಸೆ ಹೆಚ್ಚಿಸಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 81 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ 83.83 ರುಪಾಯಿ ಇದೆ.