ಉಡುಪಿ: ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಡತ ವಿಲೇವಾರಿಗೆ ದಿನಾಂಕ ನಿಗದಿ

ಉಡುಪಿ ಆಗಸ್ಟ್,21: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳನ್ನು ವಿಲೇವಾರಿ ಮಾಡುವ ಸಂಬಂಧ ಪ್ರಾಧಿಕಾರದ ಅಧ್ಯಕ್ಷರು ಕಡತಗಳನ್ನು ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದನ್ನು ತಪ್ಪಿಸಲು ಪ್ರತಿಯೊಂದು ಕಡತಕ್ಕೆ ದಿನಾಂಕವನ್ನು ಇದೀಗ ನಿಗದಿ
ಮಾಡಲಾಗಿದೆ.

ಪ್ರಾಧಿಕಾರದಲ್ಲಿ ವಿಲೇವಾರಿ ಆಗುವ ಕಡತಳಾದ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಏಕ ವಿನ್ಯಾಸ, ಭೂ ಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ, ವಲಯ ದೃಢಪತ್ರ ಮುಂತಾದ ಕಡತಗಳನ್ನು ಸಾರ್ವಜನಿಕರಿಗೆ ಪ್ರಾಧಿಕಾರದಲ್ಲಿ ಯಾವುದೇ ತೊಂದರೆ ಆಗದೆ ನಿಗಧಿತ ಅವಧಿಯೊಳಗೆ ಸಿಗುವ ಹಾಗೆ ಮಾಡಲಾಗಿದೆ. ಆ ಪ್ರಕಾರವಾಗಿ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರಕ್ಕೆ 30 ದಿವಸ, ಏಕ ವಿನ್ಯಾಸ ಅನುಮೋದನೆಗೆ 30 ದಿವಸ, ಭೂಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ 30 ದಿವಸ ಹಾಗೂ ವಲಯ ದೃಢಪತ್ರಕ್ಕೆ 15 ದಿವಸಗಳನ್ನು ನಿಗದಿ ಮಾಡಲಾಗಿರುತ್ತದೆ. ಸದರಿ ಅವಧಿಯ ಒಳಗೆ ಸಾರ್ವಜನಿಕರ ಕಡತಗಳು ವಿಲೇವಾರಿ ಆಗದಿದ್ದ ಪಕ್ಷದಲ್ಲಿ ಪ್ರಾಧಿಕಾರದ
ಆಯುಕ್ತರು/ಅಧಕ್ಷರನ್ನು ಸಂಪರ್ಕಿಸಬಹುದಾಗಿ ಪ್ರಾಧಿಕಾರ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!