ಶಿರ್ವಾ: ಕುರ್ಕಾಲು ಕೋಳಿ ಅಂಕಕ್ಕೆ ದಾಳಿ, ಏಳು ಜನರ ಬಂಧನ
ಶಿರ್ವಾ: (ಉಡುಪಿ ಟೈಮ್ಸ್ ವರದಿ)ಕುರ್ಕಾಲು ಗ್ರಾಮದ ಪಾಜೈ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಪಡೆದ ಶಿರ್ವಾ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಏಳು ಜನರನ್ನು ಬಂಧಿಸಿದ್ದಾರೆ.
ಬಂಧಿತರು: 1) ಸದಾನಂದ ಪೂಜಾರಿ (55) ತಂದೆ: ದಿ: ದೂಮ ಪೂಜಾರಿ, ವಾಸ: ಪರಿಕ ಮನೆ, ಅತ್ರಾಡಿ ಅಂಚೆ ಮತ್ತು ಗ್ರಾಮ ಹಿರಿಯಡ್ಕ, ಉಡುಪಿ ಜಿಲ್ಲೆ 2) ಶ್ರೀಶಾ (24) ತಂದೆ: ಆನಂದ, ವಾಸ: ಅಗ್ರಹಾರ, ಶ್ರೀ ಕಾಳಿಕಾಂಬ ದೇವಸ್ಥಾನದ ಹತ್ತಿರ, ತಿರ್ತೋಟ್ಟು , ಕಟಪಾಡಿ, ಉಡುಪಿ ಜಿಲ್ಲೆ, 3) ದಾಮೋದರ (39) ತಂದೆ: ದಿ: ಆನಂದ, ವಾಸ: ಪಾಜೈ, ಮೇಲ್ಮನೆ, ಕುಂಜಾರುಗಿರಿ ಪೋಸ್ಟ್, ಕುರ್ಕಾಲು ಗ್ರಾಮ, 4) ಕೃಷ್ಣ (25) ತಂದೆ: ವೇಲು , ವಾಸ: ಪಕೀರಣಕಟ್ಟೆ, ಮಲ್ಲಾರು ಗ್ರಾಮ, ಕಾಪು ತಾಲೂಕು, 5) ವಿಜಯ (43) ತಂದೆ: ಅಂಬ್ರೋಸ್‌ಕ್ವಾರ್ಡಸ್, ವಾಸ: ಮಂಚೊಟ್ಟು ಹೌಸ್, ಗಣಪನಕಟ್ಟೆ, ಬೆಳ್ಳೆ ಗ್ರಾಮ 6) ಪಾಂಡು (37) ತಂದೆ: ಸುಂದರ, ವಾಸ: ಪಕೀರಣಕಟ್ಟೆ, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ 7) ಸುಧಾಕರ (50) ತಂದೆ: ಶಿವರಾಮ್‌ಶೆಟ್ಟಿ, ವಾಸ: ಹರಿ ನಿವಾಸ, ಮಡುಂಬು ಇನ್ನಂಜೆ .
ವಶಕ್ಕೆ ಪಡೆದ ಆರೋಪಿತರನ್ನು 3:30 ಗಂಟೆಗೆ ದಸ್ತಗಿರಿಗೊಳಿಸಿ, ಅವರ ವಶದಿಂದ ಜೂಜಾಟಕ್ಕೆ ಉಪಯೋಗಿಸಿದ್ದ ರೂಪಾಯಿ 3000/-, ವಿವಿಧ ಜಾತಿಯ ಕೋಳಿಗಳು- 6 ಕಾಲಿಗೆ ಕಟ್ಟಲು ಉಪಯೋಗಿಸುವ ಸಣ್ಣ ಕತ್ತಿ (ಬಾಳು) -2, ಹಾಗೂ ಸ್ಥಳದಲ್ಲಿದ್ದ 1) ಕೆಎ.20 ಎಎ 0543 ಅಟೋ ರಿಕ್ಷಾ, 2) ಕೆಎ 20 ಎಂಸಿ 5808 ಕಾರು 3) ಕೆಎ 20 ಯು 2396 ಮೋಟಾರ್‌ಸೈಕಲ್, 4) ಕೆಎ 20 ಇಎಫ್6965 ನೇ ಮ್ಯಾಸ್ಟ್ರೋ ದ್ವಿಚಕ್ರ ವಾಹನ 5) ಕೆಎ 20 ಇಸಿ 7577 ಮೋಟಾರ್ ಸೈಕಲ್ 6) ಕೆಎ 20 ಇಯು 3575 ಮೋಟಾರ್‌ಸೈಕಲ್7) ಕೆಎ 20 ಇಎ 595 ಮೋಟಾರ್ ಸೈಕಲ್ 8) ಕೆಎ 20 ಇಎಲ್ 5393 ಮೋಟಾರ್ ಸೈಕಲ್ 9) ಕೆಎ 20 ಇಎಫ್ 1206 ದ್ವಿಚಕ್ರವಾಹನ 10) ಕೆಎ 20 ಎಎ 3704 ಅಟೋ ರಿಕ್ಷಾ ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64 /2020, ಕಲಂ: 87, 93 ರಂತೆ ಪ್ರಕರಣ ದಾಖಲಾಗಿರುತ್ತದೆ.