ಸಿದ್ದರಾಮೋತ್ಸವದ ಯಶಸ್ಸಿನ ಬೆನ್ನಲ್ಲೇ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಚಿಂತನೆ ನಡೆಸಿದ ಬಿಜೆಪಿ

ಸಿದ್ದರಾಮೋತ್ಸವಕ್ಕೆ ಪಾಲ್ಗೊಂಡ ಜನಸ್ತೋಮ

ಬೆಂಗಳೂರು ಆ.6: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಿದ್ದರಾಮೋತ್ಸವದ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯು ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ ಇದೇ ತಿಂಗಳ ಕೊನೆಯಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಸ್ಥಳ ಮತ್ತು ದಿನಾಂಕ ನಿಗದಿಯಾಗಬೇಕಾಗಿದೆ. ಮುನಿಸಿಕೊಂಡಿರುವ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿ ಸಲು ಮತ್ತು ಅವರ ವಿಶ್ವಾಸ ಗೆಲ್ಲಲು ತಕ್ಷಣದಲ್ಲಿ ಇಂತಹದ್ದೊಂದು ಸಮಾ ವೇಶದ ಅಗತ್ಯವಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಹಮ್ಮಿಕೊಳ್ಳಲಾಗಿತ್ತು.

ಆದರೆ, ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ಪಕ್ಷದ ಯುವ ಮೋರ್ಚಾ ನಾಯಕ ಪ್ರವೀಣ್ ಹತ್ಯೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದ ಪರಿಣಾಮ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಮೂಲಗಳ ಪ್ರಕಾರ ಇತ್ತ ಸಿದ್ದರಾಮೋತ್ಸವದಲ್ಲಿ ನಿರೀಕ್ಷೆಗೂ ಮೀರಿದ ಜನಸಾಗರ ಸೇರಿದ್ದು ಕಾಂಗ್ರೆಸ್ ಗೆ ಮಾತ್ರವಲ್ಲದೆ ಬಿಜೆಪಿಗೂ ಶಾಕ್ ನೀಡಿದೆ. ಮಾತ್ರವಲ್ಲದೆ ಕಾರ್ಯಕ್ರಮ ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ‘ಈ ಕಾರ್ಯಕ್ರಮ ಬಿಜೆಪಿಗೆ ಎಚ್ಚರಿಕೆಯ ಗಂಟೆ’ ಎಂಬ ತೀರ್ಮಾನಕ್ಕೆ ಬಂದಿದ್ದೂ ಮಾತ್ರವಲ್ಲದೇ, ‘ಸುಮ್ಮನೆ ಕೈಕಟ್ಟಿ ಕುಳಿತರೆ, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಹುದು.

ಬಿಜೆಪಿಗೆ ಇತರ ಪಕ್ಷಗಳಿಂದ ನಾಯಕರು ವಲಸೆ ಬರುವ ಮಾತು ಹಾಗಿರಲಿ, ಆ ಪಕ್ಷದತ್ತಲೇ ವಲಸೆ ಹೋದರೂ ಅಚ್ಚರಿ ಇಲ್ಲ ‘ಎಂಬ ಆತಂಕವನ್ನು ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎಂದು ತಿಳಿಸಿವೆ. ಮಾತ್ರವಲ್ಲದೆ ‘ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನಲ್ಲಿ ಇಷ್ಟೆಲ್ಲಾ ಸಿದ್ಧತೆ ನಡೆಯುತ್ತಿದ್ದರೂ, ನಮ್ಮ ಪಕ್ಷದಲ್ಲಿ ಸಿದ್ಧತೆಯ ಕೊರತೆ ಇದೆ. ಸಮಾವೇಶಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಪಕ್ಷ ಇದೇ ವೇಗದಲ್ಲಿ ಮುನ್ನಡೆದರೆ, ಕೊನೇ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಅಧ್ಯಕ್ಷರಾಗಲಿ, ಬೇರೇ ಯಾರೇ ಆಗಲಿ ಆ ಬಗ್ಗೆ ಗಮನಹರಿಸುತ್ತಿಲ್ಲ. ನಾನೇ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡುತ್ತೇನೆ ಎಂದು ಹೇಳಿದರೂ ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಿದರೆ ರಾಜ್ಯಾದ್ಯಂತ ಸುತ್ತಾಡುತ್ತೇನೆ’ ಎಂದು ಶಾ ಅವರಿಗೆ ಯಡಿಯೂರಪ್ಪ ಅವರು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ

Leave a Reply

Your email address will not be published. Required fields are marked *

error: Content is protected !!