ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ: ‘ಸಂಸ್ಕೃತಿ ಉತ್ಸವ-2024’ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ‘ಸಂಸ್ಕೃತಿ ಉತ್ಸವ -2024 ‘ ಇದೆ ತಿಂಗಳ 23 ಮತ್ತು 24ನೇ ತಾರೀಕಿನಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಕಲಾವಿದ, ನಿರ್ದೇಶಕ, ಸಾಹಿತಿ ಡಾ. ಭರತ್ ಕುಮಾರ್ ಪೊಲಿಪು ಇಂದು ಉಡುಪಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ಉಪಾಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಮುಂಬೈ ರಂಗಭೂಮಿ ಕಲಾವಿದ ಮೋಹನ್ ಮಾರ್ನಾಡ್, ತುಳುಕುಟ ಉಡುಪಿಯ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕಲಾವಿದರಾದ ಜಯರಾಮ್ ಮಣಿಪಾಲ್ ,ಯಶೋಧ ಕರ್ಕೇರ ,ನರಸಿಂಹಮೂರ್ತಿ, ಮಧುಕರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು