ಹಳಿ ದಾಟುತ್ತಿದ್ದಾಗ ಜಾರಿ ಬಿದ್ದ ವಿದ್ಯಾರ್ಥಿನಿಗೆ ರೈಲು ಡಿಕ್ಕಿಯಾಗಿ ಸಾವು- ಬೃಹತ್ ಪ್ರತಿಭಟನೆ
ಹಾಸನ: ಹಾಸನದಲ್ಲಿ ರೈಲು ಹಳಿ ಮೇಲೆ ಜಾರಿಬಿದ್ದ ವಿದ್ಯಾರ್ಥಿನಿಗೆ ರೈಲು ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದ ಈ ಘಟನೆ ನಡೆದಿದೆ ಎಂದು ಆರೋಪಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಅಂಕಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ ಪ್ರೀತಿ ಪುಟ್ಟಸ್ವಾಮಿ ಎಂಬ 22 ವರ್ಷದ ವಿದ್ಯಾರ್ಥಿನಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಆಕೆಯ ತಂದೆ ಪುಟ್ಟಸ್ವಾಮಿ ಆಕೆಯನ್ನು ಆಟೋದಲ್ಲಿ ಇಳಿಸಿದ ನಂತರ ಈ ದುರ್ಘಟನೆ ನಡೆದಿದೆ. ಹಳಿಗಳ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುತ್ತಿದ್ದಾಗ ವಿದ್ಯಾರ್ಥಿನಿ ಜಾರಿ ಹಳಿ ಮೇಲೆ ಬಿದ್ದಿದ್ದಾಳೆ. ಈ ವೇಳೆ , ಮುಂದೆ ಬರುತ್ತಿದ್ದ ರೈಲು ಅವಳಿಗೆ ಡಿಕ್ಕಿ ಹೊಡೆದಿದೆ.
ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಸನ-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಟೈರ್‌ಗಳನ್ನು ಸುಟ್ಟು ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಮೇಲ್ಸೇತುವೆ ಇಲ್ಲದ ಕಾರಣ ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಹಳಿ ದಾಟಿ ಮಾರುಕಟ್ಟೆಗೆ , ಕಾಲೇಜಿಗೆ ಹೋಗಬೇಕಾದರೆ ಪರದಾಡಬೇಕಾಗಿದೆ.
ಇದು ಅಕ್ರಮ ಕ್ರಾಸಿಂಗ್ ಆಗಿರುವುದರಿಂದ ಹಳಿಗಳನ್ನು ದಾಟದಂತೆ ನಿವಾಸಿಗಳಿಗೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಆದಾಗ್ಯೂ, ಕಾಲೇಜುಗಳು ಮತ್ತು ಮಾರುಕಟ್ಟೆ ಸಮೀಪವಿರುವ ಕಾರಣ, ನಿವಾಸಿಗಳು ಇನ್ನೊಂದು ಬದಿಗೆ ಹಳಿಗಳನ್ನು ದಾಟಲು ಸುಲಭವಾದ ಮಾರ್ಗದಲ್ಲಿ ಹೋಗುತ್ತಾರೆ.