ಪಿತ್ರೋಡಿ ಮುಖ್ಯ ರಸ್ತೆ ಅವ್ಯವಸ್ಥೆ ಶೀಘ್ರವೆ ದುರಸ್ತಿ ಪಡಿಸಿ: ರವಿರಾಜ್ ಸಾಲಿಯಾನ್
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದಿಂದ ಪಿತ್ರೋಡಿಗೆ ಸಂಪರ್ಕಿಸುವ ಮುಖ್ಯ ರಸ್ತೆ ದುರಸ್ಥಿಗೊಂಡು ವರುಷ ಕಳೆದರೂ ಸರಕಾರ,ಸ್ಥಳೀಯ ಆಡಳಿತ ಮೌನ ವಹಿಸಿರುವುದು ಖಂಡನೀಯ.
ಜೆಡಿಎಸ್ ಸರಕಾರ ಇರುವಾಗ ಉದ್ಯಾವರ ಪಿತ್ರೋಡಿ ಸಂಪರ್ಕಿಸುವ ರಸ್ತೆಯ ಕಾಮಗಾರಿಗೆ ಹಣ ಬಿಡುಗಡೆಗೆ ಅನುಮೋದನೆ ದೊರಕಿತ್ತು. ಈಗ ಆ ರಸ್ತೆ ಸಂಪೂರ್ಣ ಹದಗೆಟ್ಟು ಪಾದಚಾರಿಗಳು, ಬೈಕ್ ಸವಾರರು ನಿತ್ಯ ಓಡಾಡಲು ಸಂಕಷ್ಟ ಎದುರಿಸುತ್ತದ್ದಾರೆ.
ಈ ಭಾಗದಲ್ಲಿ ಫಿಶ್ ಮಿಲ್ ಗಳಿದ್ದು ಇವರ ಭಾರೀ ಗಾತ್ರದ ವಾಹನಗಳು ತೆರಳಿ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾರೀ ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜನಸಾಮಾನ್ಯರು ಓಡಾಡುವ ಈ ರಸ್ತೆಯನ್ನು ಶೀಘ್ರವೆ ದುರಸ್ತಿ ಪಡಿಸಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತೇನೆಂದು ಜೆ.ಡಿ.ಎಸ್ ಮೀನುಗಾರಿಕಾ ಅಧ್ಯಕ್ಷ ರವಿರಾಜ್ ಸಾಲಿಯಾನ್ ಹೇಳಿದ್ದಾರೆ.