ಚಾಲಕನ ನಿಯಂತ್ರಣ ತಪ್ಪಿ ಅಂಬ್ಯುಲೆನ್ಸ್ ಪಲ್ಟಿ- ಓರ್ವನಿಗೆ ಗಾಯ

ತೀರ್ಥಹಳ್ಳಿ ಆ.1: ಚಾಲಕನ ನಿಯಂತ್ರಣ ತಪ್ಪಿದ ಮೃತದೇಹವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ವೊಂದು ಪಲ್ಟಿಯಾಗಿ ಓರ್ವ ಗಾಯಗೊಂಡ ಘಟನೆ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ತರೀಕೆರೆ ನಿವಾಸಿಯೊಬ್ಬರ ಮೃತದೇಹವನ್ನು ಇಂದು ಬೆಳಿಗ್ಗೆ ಸಾಗಿಸುತ್ತಿದ್ದಾಗ ಆಗುಂಬೆ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಮೃತ ವ್ಯಕ್ತಿಯ ಮಗನಿಗೆ ಪೆಟ್ಟಾಗಿದ್ದು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!