ದೆಂದೂರುಕಟ್ಟೆ: ಕೋಳಿ ಅಂಕಕ್ಕೆ ದಾಳಿ- 8 ಮಂದಿ ವಶಕ್ಕೆ

ಕಾಪು ಆ.1(ಉಡುಪಿ ಟೈಮ್ಸ್ ವರದಿ): ದೆಂದೂರುಕಟ್ಟೆಯ ಇಂದ್ರಾಳಿ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಸದಾನಂದ ಪೂಜಾರಿ, ತೇಜಸ್, ಸುರೇಶ್, ನಿತೇಶ್, ಸಂತೋಷ್, ಸ್ವಾಮಿನಾಥ್, ಸಂದೀಪ್ ಶೆಟ್ಟಿ ಪೊಲೀಸರು ವಶಕ್ಕೆ ಪಡೆದವರು.

ಈ ವಿಚಾರವಾಗಿ ಖಚಿತ ಮಾಹಿತಿ ಮೇರೆಗೆ ನಿನ್ನೆ ದಾಳಿ ನಡೆಸಿದ ಕಾಪು ಪೊಲೀಸ್ ಠಾಣೆಯ ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷಕ ಭರತೇಶ ಕಂಕಣವಾಡಿ ಅವರು ಇತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಳುಗಳನ್ನು ಕಟ್ಟಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದಿದೆ. ಈ ವೇಳೆ 8 ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 450 ರೂ ನಗದು, 10 ಕೋಳಿಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

1 thought on “ದೆಂದೂರುಕಟ್ಟೆ: ಕೋಳಿ ಅಂಕಕ್ಕೆ ದಾಳಿ- 8 ಮಂದಿ ವಶಕ್ಕೆ

Leave a Reply

Your email address will not be published. Required fields are marked *

error: Content is protected !!