ಬೈಂದೂರು: ರೈಲ್ವೆ ಹಳಿಯಲ್ಲಿ ಮಹಿಳೆ ಮೃತದೇಹ ಪತ್ತೆ
ಬೈಂದೂರು ಆ.1 (ಉಡುಪಿ ಟೈಮ್ಸ್ ವರದಿ): ಕಿರಿಮಂಜೇಶ್ವರದ ರೈಲ್ವೆ ಹಳಿ ಸಮೀಪ ಚರಂಡಿಯಲ್ಲಿ 45 ರಿಂದ 50 ವಯಸ್ಸಿನ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.
ಜು.31 ರಂದು ಟ್ರ್ಯಾಕ್ ಸೇಪ್ಟಿಮಾನ್ ಆದ ಗಣಪತಿ ಮುಕ್ರೀಯವರು ಸೇನಾಪುರದಿಂದ ರೈಲ್ವೆ ಹಳಿಯನ್ನು ಪರಿಶೀಲಿಸುತ್ತಾ ಅರೆಹೊಳೆ ಕಡೆಗೆ ಬರುತ್ತಿರುವಾಗ ಕಿರಿಮಂಜೇಶ್ವರದ ರೈಲ್ವೆ ಟ್ರ್ಯಾಕ್ ಕೀ ಮೀ ಸಂಖ್ಯೆ 639/7 ರಿಂದ 639/8 ಮಧ್ಯದ ರೈಲ್ವೆ ಹಳಿಯ ಪಕ್ಕದಲ್ಲಿರುವ ಚರಂಡಿಯಲ್ಲಿ ಮಹಿಳೆಯ ಮೃತದೇಹ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಅವರು ಈ ಬಗ್ಗೆ ಬಿಜೂರು ರೈಲ್ವೆ ಸ್ಟೇಷನ್ ನ ಸ್ಟೇಷನ್ ಮಾಸ್ಟರ್ ಸಂದೀಪ ಕುಮಾರ ಅವರಿಗೆ ಮಾಹಿತಿ ನೀಡಿದ್ದು, ಸಂದೀಪ ಕುಮಾರ ಅವರು ನೀಡಿದ ಮಾಹಿತಿಯಂತೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.