| ಪಣಜಿ ಆ.1: ಮುಂಬೈಯ ಕುಖ್ಯಾತ ಕ್ರಿಮಿನಲ್ ಎಂದು ಹೇಳಲಾದ ವಿಕ್ರಾಂತ್ ಆಲಿಯಾಸ್ ವಿಕ್ಕಿ ದತ್ತಾತ್ರೇಯ ದೇಶಮುಖ್ನನ್ನು ಮುಂಬೈ ಕ್ರೈಮ್ ಬ್ರಾಂಚ್ನೊಂದಿಗೆ ಗೋವಾ ಪೊಲೀಸರು ಬಂಧಿಸಿದ್ದಾರೆ.
ಪಣಜಿ ಪಟ್ಟಣ ಪೊಲೀಸ್ ಠಾಣೆ ಹಾಗೂ ನವಿ ಮುಂಬೈ ಕ್ರೈಮ್ ಬ್ರಾಂಚ್ ತಡ ರಾತ್ರಿ ಕಾರ್ಯಾಚರಣೆ ನಡೆಸಿ ಮೂವತ್ತಕ್ಕೂ ಅಧಿಕ ಹೇಯ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಈತನನ್ನು ನಿನ್ನೆ ಬಂಧಿಸಿದ್ದಾರೆ. ಆರೋಪಿಯಿಂದ ದೇಶಿ ನಿರ್ಮಿತ ಪಿಸ್ತೂಲ್, ಐದು ಸುತ್ತ ಗುಂಡು, ಕಾಟ್ರಿಜ್, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ವಿಕ್ರಾಂತ್ ವಿರುದ್ಧ ಮಹಾರಾಷ್ಟ್ರದಲ್ಲಿ 30ಕ್ಕೂ ಅಧಿಕ ಗಂಭೀರ ಪ್ರಕರಣಗಳು ದಾಖಲಾಗಿವೆ. ಹತ್ಯೆ ಹಾಗೂ ಎಂಸಿಒಸಿಎ ಪ್ರಕರಣಕ್ಕೆ ಸಂಬಂಧಿಸಿ ಈತ ಮುಂಬೈಯ ನೆರುಲ್ ಪೊಲೀಸ್ ಠಾಣೆಗೆ ಬೇಕಾದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. | |