ಕೊಲೆಯಾದ ಫಾಝಿಲ್ – ಮಸೂದ್ ಮನೆಗಳಿಗೂ ಭೇಟಿ ಕೊಡುತ್ತೇನೆ: ಸಿಎಂ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೆಯಾದ ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ನ ಫಾಝಿಲ್ ಮನೆಗೆ ಮುಂದಿನ ದಿನಗಳಲ್ಲಿ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಕೊಲೆಯಾದ ಪ್ರವೀಣ್ ನೆಟ್ಟರ್ ಮನೆಗೆ ಭೇಟಿ ನೀಡಿ ಮಸೂದ್ ಹಾಗೂ ಫಾಝೀಲ್ ಮನೆಗೆ ಸಿಎಂ ಭೇಟಿ ಕೊಡದ ಬಗ್ಗೆ ಸಾರ್ವಜನಿಕರು, ಕಾಂಗ್ರೆಸ್ ನ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರವೀಣ್ ನೆಟ್ಡಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯ ಹಂತದಲ್ಲಿದೆ. ಆದಷ್ಟು ಬೇಗನೇ ಕೊಲೆಗಡುಕರ ಪತ್ತೆಯಾಗಲಿದೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ಐಎ ಗೆ ಆದಷ್ಟು ಬೇಗ ಪ್ರಕರಣ ವರ್ಗಾವಣೆ ಮಾಡುತ್ತೇವೆ. ಈಗಾಗಲೇ ಎನ್ಐಎಗೆ ಕೇಸ್ ಬಗ್ಗೆ ಅನೌಪಚಾರಿಕವಾಗಿ ತಿಳಿಸಿದ್ದೇವೆ. ಕೆಲವು ಎನ್ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ ಎಂದರು.