ಮಲ್ಪೆ: ವ್ಯಕ್ತಿ ನೇಣಿಗೆ ಶರಣು
ಮಲ್ಪೆ ಜು.30 (ಉಡುಪಿ ಟೈಮ್ಸ್ ವರದಿ): ತಮಗಿದ್ದ ಅನಾರೋಗ್ಯದಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಿಟ್ಟು ಪೂಜಾರಿ (65) ಆತ್ಮಹತ್ಯೆ ಮಾಡಿಕೊಂಡವರು. ಜು.29 ರಂದು ಮನೆಯಿಂದ ಹೋದ ಕಿಟ್ಟು ಪೂಜಾರಿ ಅವರು ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಅವರನ್ನು ಹುಡುಕಾಡಿದಾಗ ಎಡಬೆಟ್ಟು ರಸ್ತೆಯಿಂದ ಕೆಳನೇಜಾರ್ ಕಡೆಗೆ ಹೋಗುವ ರಸ್ತೆಯ ಹಾಡಿಯ ಬದಿಯಲ್ಲಿ ಅವರ ಸೈಕಲ್ ನಿಲ್ಲಿಸಿರುವುದನ್ನು ಕಂಡು ಬಂದಿತ್ತು. ಬಳಿಕ ಕಾಡಿನ ಹುಡುಕಾಡಿದಾಗ ಕಿಟ್ಟು ಪೂಜಾರಿ ಅವರು ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಇವರು ಕಳೆದ 10 ವರ್ಷಗಳಿಂದ ತಲೆಯ ನರದ ಸಮಸ್ಯೆಯಿಂದ ಬಳಲುತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜು.29 ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಮಗ ಪ್ರಜ್ವಲ್ ಎಂಬವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ,ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4, ಬೆಂಗಳೂರು.