ವಿಶ್ವ ಛಾಯಾಗ್ರಾಹಕ ದಿನಾಚರಣೆ: ಕೊರೋನಾ ವಾರಿಯರ್ಸ್, ಛಾಯಾಗ್ರಾಹಕರಿಗೆ ಸನ್ಮಾನ

ಕಾಪು: ವಿಶ್ವಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ, ಸೌತ್ ಕೆನರಾ ಪೋಟೋ ಗ್ರಾಫಿಕ್ಸ್ ಏಸೋಶಿಯೇಶನ್ ಕಾಪು ವಲಯದ ವತಿಯಿಂದ ವಲಯದ ಛಾಯಾಗ್ರಾಹಕ ಕುಟುಂಬಿಕರಾದ ಕೊರೋನಾ ವಾರಿಯರ್‍ಸ್‌ರವರನ್ನು ಅವರ ಮನೆಗಳಲ್ಲಿ ಸನ್ಮಾನಿಸುವ ಕಾರ್‍ಯಕ್ರಮ ಬುಧವಾರ ಸಂಜೆ ಜರಗಿತು.

ಕಾಪು ವಲಯದ ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಅವರ ಪತ್ನಿ ಆಶಾಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಗೀತಾ ಬಾಲಕೃಷ್ಣ ರವರನ್ನು ಅವರ ಉಚ್ಚಿಲ ಶ್ರೀಭಾಗ್ಯ ಮನೆಯಲ್ಲಿ ಸನ್ಮಾನಿಸಿದರೆ, ಬೆಳ್ಮಣ್ಣಿನ ಛಾಯಾಗ್ರಾಹಕ ವಿಲ್ಫ್ರೆಡ್ ಕಾಸ್ತಲೀನೋ ಅವರ ಪತ್ನಿ ಉಡುಪಿಯ ಟಿ.ಎಂ.ಪೈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜೇನ್ ಮೇವಿ ವೇಗಸ್ ಅವರನ್ನು ಬೆಳ್ಮಣ್ಣಿನ ಅವರ ಸ್ವಗ್ರಹದಲ್ಲಿ ಎಸ್‌ಕೆಪಿಎ ಕಾಪು ವಲಯದ ಅಧ್ಯಕ್ಷ ವೀರೇಂದ್ರ ಪೂಜಾರಿ ಮತ್ತು ಅವರ ತಂಡ ಸನ್ಮಾನಿಸಿದರು.

ಕಾಪು ವಲಯಾಧ್ಯಕ್ಷ ವೀರೇಂದ್ರ ಪೂಜಾರಿ ಮಾತನಾಡಿ, 181ನೇ ಛಾಯಾಗ್ರಾಹಕ ದಿನಾಚರಣೆಯನ್ನು ನಾವು ನಮ್ಮ ಛಾಯಾಗ್ರಾಹಕರ ಕುಟುಂಬಿಕರು ಕೊರೋನಾ ವಾರಿಯರ್‍ಸ್ ಇರುವುದನ್ನು ಕಂಡು ಈ ಬಾರಿ ವಿಷಿಷ್ಠವಾಗಿ ಆಚರಿಸಿದ್ದೇವೆ. ಎಲ್‌ಎಂಎನ್ ಡ್ಯಾಲಿನ್ ಎಂಬ ವಿಜ್ಞಾನಿ ಛಾಯಾಗ್ರಹಣದ ಪಿತಾಮಹ. 181ನೇ ವರ್ಷಗಳ ಹಿಂದೆ ಛಾಯಾಗ್ರಹಣವು ಅಸ್ತಿತ್ವಕ್ಕೆ ಬಂತು. ಆ ದಿನವನ್ನು ಛಾಯಾಗ್ರಾಹಕರ ದಿನವೆಂದು ಆಚರಿಸುತ್ತಿದ್ದೇವೆ ಎಂದರು.


ಆಶಾಕಾರ್ಯಾಕರ್ತೆಯರನ್ನು ಗೀತಾ ಬಾಲಕೃಷ್ಣ ಪೂಜಾರಿ ಮಾತನಾಡಿ, ಕೋವಿಡ್ ೧೯ನಿಂದ ಆಶಾ ಕಾರ್ಯಕರ್ತೆಯರನ್ನು ಸಮಾಜ ಗುರುತಿಸುವಂತಾಗಿದೆ. ಈಗ ಯಾರ ಮನೆಗೆ ಹೋದರೂ, ಅವರು ಆದರದಿಂದ ಬರಮಾಡಿ ಕೊಳ್ಳುತ್ತಾರೆ. ಅಂತೆಯೇ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. ಕಾಪು ವಲಯ ಎಸ್‌ಕೆಪಿಎ ಸಂಸ್ಥೆಯು ನಮಗೆ ಅನ್ನ ನೀಡುವ ಸಂಸ್ಥೆ. ಬೇರೆ ಯಾವುದೇ ಸಂಸ್ಥೆ ಸನ್ಮಾನಿಸಿದಾಗ ಕೊಡದ ಖುಷಿ, ಈಗ ಸಿಕ್ಕಿದೆ ಎಂದರು.


ಬಾಲಕೃಷ್ಣ ಪೂಜಾರಿ ಮಾತನಾಡಿ, ಕಾಪು ಎಸ್‌ಕೆಪಿಎ ಸಂಸ್ಥೆ ಮಾಡಿದ ಸನ್ಮಾನ ಅತೀವ ಸಂತಸ ತಂದಿದೆ. ನಾವು ನೀರೀಕ್ಷಿಸದೆ ಇದ್ದ ಸನ್ಮಾನ ನಮ್ಮ ಮನೆ ಬಾಗಿಲಿಗೆ ಬಂದಿದೆ ಎಂದರು. ಈ ಸಂದರ್ಭ ಕಾಪು ವಲಯ ಎಸ್‌ಕೆಪಿಎ ಅಧ್ಯಕ್ಷ ವೀರೇಂದ್ರ ಪೂಜಾರಿ, ಕಾರ್ಯದರ್ಶಿ ಸಚಿನ್ ಉಚ್ಚಿಲ, ಕೋಶಾಧಿಕಾರಿ ಸುಜಿತ್ ಕಲ್ಲುಗುಡ್ಡೆ, ಪೂರ್ವಧ್ಯಕ್ಷರಾದ ರವಿ ಕಟಪಾಡಿ, ಪ್ರಮೋದ್ ಸುವರ್ಣ ಶಂಕರಪುರ, ಉದಯ ಮುಂಡ್ಕೂರು, ಕೇಂದ್ರ ಜೊತೆ ಕಾರ್ಯದರ್ಶಿ ಸಂತೋಷ್ ಕಾಪು ಉಪಾಧ್ಯಕ್ಷ ಸಂತೋಷ್ ಶೆಟ್ಟಿಗಾರ, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!