ನಮ್ಮ ದೇಶ ಶಾಂತಿ ತೋಟ ಅದಕ್ಕೆ ಕಲ್ಲು ಹೊಡೆಯಬೇಡಿ- ನಿಮ್ಮ ಕಾರ್ಯಕರ್ತರೇ ನಿಮಗೆ ಬುದ್ದಿ ಕಳಿಸುತ್ತಾರೆ: ಕೃಷ್ಣಮೂರ್ತಿ ಆಚಾರ್ಯ
ಉಡುಪಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಸೋಮವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸೇರಿದಂತೆ ನೂರಾರು ಜನ ಬಿಜೆಪಿ ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಇದ್ದಕ್ಕೆ ಸಂಬಂಧಿಸಿದಂತೆ ಸಂದೀಪ್ ಹರವಿನಗಂಡಿ ಜತೆ ಸಂಸದ ತೇಜಸ್ವಿ ಸೂರ್ಯ ದೂರವಾಣಿ ಕರೆ ಮಾಡಿ ಮಾತಾಡಿ ಮನವೊಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ನಮ್ಮದೇ ಸರ್ಕಾರ ಇದೆ ಏನು ಮಾಡೋದು ಹೇಳಿರುವುದು ಒಬ್ಬ ವಿದ್ಯಾವಂತನಾಗಿ ಅವಿದ್ಯಾವಂತನ ರೀತಿ ಹೇಳಿಕೆ ಕೊಡುವುದು ಎಷ್ಟು ಸರಿ. ಅದೂ ಕೂಡ ಜವಾಬ್ದಾರಿಯುತ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಹೇಳುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತ ಇರದೇ ಇರುವ ರಾಜ್ಯಗಳಲ್ಲಿ ನಿಮ್ಮ ಯುವ ಕಾರ್ಯಕರ್ತರಿಗೆ ಇದೇ ರೀತಿಯ ಕಲ್ಲು ಹೊಡೆಯುವ ಸಿದ್ಧಾಂತವನ್ನು ಹೇಳಿ ಕೊಡುತ್ತಿದ್ದೀರಾ ತೇಜಸ್ವಿ ಸೂರ್ಯರವರೇ?. ಯುವಕರ ಕೈಗೆ ಪೆನ್ನು, ಪುಸ್ತಕ ಕೊಟ್ಟು ವಿದ್ಯಾವಂತ ಯುವಕರನ್ನಾಗಿ ಮಾಡಿ. ಯುವ ಪೀಳಿಗೆಗೆ ಉದ್ಯೋಗ ಕೊಡಬೇಕಾಗಿತ್ತು ನೀವು. ಅದರೆ ತೇಜಸ್ವಿ ಸೂರ್ಯಗೆ ಕಾರ್ಯಕರ್ತರು ನಮಗೆ ರಕ್ಷಣೆ ಕೊಡಿಸಿ ನಮ್ಮ ಸರ್ಕಾರ ಇದ್ರು ಕೂಡಾ ನಮಗೆ ರಕ್ಷಣೆ ಇಲ್ಲ ಎಂದು ಕೇಳಿದಾಗ ಎಲ್ಲಾರಿಗೂ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ಹೇಳುವುದಾದರೆ ಮತ್ತೆ ದೇಶದ ಜನರಿಗೆ ಯಾವ ರೀತಿ ಸ್ಪಂದಿಸುತ್ತೀರ.
ಇವತ್ತು ನಿಮ್ಮ ಕಾರ್ಯಕರ್ತರೇ ನಿಮಗೆ ತಿರುಗಿ ಬಿದ್ದಿದ್ದಾರೆ ಅವರನ್ನು ಸಮಾಧಾನಪಡಿಸುವ ಬದಲು ಕಾಂಗ್ರೆಸ್ ಸರಕಾರ ಆಗಿದ್ರೆ ಕಲ್ಲು ಹೊಡೆಯ ಬಹುದಿತು ಹೇಳ್ತೀರಿ ಅಲ್ವ ತೇಜಸ್ವಿ ಸೂರ್ಯ ಅವರೇ ಇದೇನಾ ನಿಮ್ಮ ದೇಶಭಕ್ತಿ. ನಮ್ಮ ಭಾರತ ದೇಶ ಶಾಂತಿ ತೋಟವಾಗಿದೆ ಅದಕ್ಕೆ ಕಲ್ಲು ಹೊಡೆಯಬೇಡಿ ನಿಮ್ಮ ಕಾರ್ಯಕರ್ತರೇ ನಿಮಗೆ ಬುದ್ದಿ ಕಳಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ 3 ಮಂದಿ ಯುವಕರ ಸಾವಿಗೆ ಕಾರಣವಾದ ಆರೋಪಿಗಳನ್ನು ಯಾವುದೇ ಜಾತಿ, ಧರ್ಮ, ಪಕ್ಷ ಭೇದವಿಲ್ಲದೇ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹತ್ಯೆಯಾದ ಕುಟುಂಬಕ್ಕೆ ನ್ಯಾಯ ಕೊಡಿಸಿ ಮತ್ತೆ ಯಾವತ್ತಿಗೂ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಕೃಷ್ಣಮೂರ್ತಿ ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.