ಲಿಫ್ಟ್ ನಲ್ಲಿ ತ್ರಿವಳಿ ತಲಾಖ್- ಪತಿಯ ವಿರುದ್ಧ ದೂರು

ಬೆಂಗಳೂರು ಜು.29: ವದಕ್ಷಿಣೆ ಕಿರುಕುಳ ನೀಡಿ ಲಿಫ್ಟ್ ನಲ್ಲಿ ತ್ರಿವಳಿ ತಲಾಖ್ ಹೇಳಿದ ಪತಿಯ ವಿರುದ್ಧ ತಸ್ಮಿಯಾ ಹುಸೇನಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ತಸ್ಮಿಯಾ ಹುಸೇನಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಮನೆಯವರು ಅಕ್ರಂಗೆ ಒಟ್ಟು 30 ಲಕ್ಷ ವಸ್ತುಗಳನ್ನ ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಹಣದಾಹಿಯಾಗಿದ್ದ ಅಕ್ರಂ ಇನ್ನೂ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದ ಎಂದು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.

ಪತಿ ಅಕ್ರಂ ರಂಜಾನ್ ಹಬ್ಬಕ್ಕೆ ತೆರಳಿದ ವೇಳೆ 10 ಲಕ್ಷ ಹಣ ತರಲು ಹೇಳಿದ್ದ. ಹಣ ತರದಿದ್ದಲ್ಲಿ ಮನೆಗೆ ಸೇರಿಸೋದಿಲ್ಲ ಎಂದು ಫೋನ್ ಮಾಡಿದ್ದ. ಇದಾದ ಬಳಿಕ ಕೆಲ ದಿನಗಳ ನಂತರ ಅಪಾರ್ಟ್ ಮೆಂಟ್ ಗೆ ತನ್ನನ್ನು ಕರೆಸಿಕೊಂಡಿದ್ದ. ಹಣ ನೀಡಿಲ್ಲ ಅಂದ್ರೆ ಮಂಗಳಸೂತ್ರ ಬಿಚ್ಚಿ ಕೊಡುವಂತೆ ಹೇಳಿದ್ದ. ಇದಕ್ಕೆ ಒಪ್ಪದಿದ್ದಾಗ ತಲಾಖ್ ಹೇಳಿದ್ದ. ಅಪಾರ್ಟ್ ಮೆಂಟ್ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಮೂರು ಬಾರಿ ತಲಾಖ್ ಹೇಳಿ ಪತ್ನಿಯನ್ನ ಹೊರ ದಬ್ಬಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಹಾಗೂ ಇದರಿಂದ ಬೇರಸಗೊಂಡ ಪತ್ನಿ ತಸ್ಮಿಯಾ ಹುಸೇನಿ ತನ್ನ ಪತಿ ವಿರುದ್ಧ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!