ಉಡುಪಿ ಜಿಲ್ಲಾ ಭಾರತ ಸೇವಾ ದಳ ಅಧ್ಯಕ್ಷರಾಗಿ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಆಯ್ಕೆ

ಉಡುಪಿ: ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆಗೆ 2022-27 ರ ಸಾಲಿಗೆ ಪದಾಧಿಕಾರಿಗಳ ಚುನಾವಣೆ ನಡೆದು ಅವಿರೋಧವಾಗಿ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಸ್ಥೆ ಯ ಅಧ್ಯಕ್ಷರಾದ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವರು ಆಯ್ಕೆಗೊಂಡಿರುತ್ತಾರೆ.

ಉಪಾಧ್ಯಕ್ಷರಾಗಿ ಉಡುಪಿ ನಗರಸಭಾ ಸದಸ್ಯರಾದ ಗಿರೀಶ್ ಎಂ. ಅಂಚನ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆರೂರು ತಿಮ್ಮಪ್ಪ ಶೆಟ್ಟಿಆಯ್ಕೆಗೊಂಡಿದ್ದು ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರಾದ ಸಂಜೀವ ದೇವಾಡಿಗ ಕಾರ್ಕಳ, ಹಾಗೂ ಖಜಾಂಚಿಯಾಗಿ ನಿವೃತ್ತ ಶಿಕ್ಷಕರಾದ ಹೆರಾಲ್ಡ್ ಡಿಸೋಜಾ, ಉಡುಪಿ ಆಯ್ಕೆಗೊಂಡಿರುತ್ತಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾಜಿ ಶಾಸಕರಾದ ಯು.ಆರ್ ಸಭಾಪತಿ, ಸುವರ್ಧನ ನಾಯಕ್, ಮಹಾಬಲ ಕುಂದರ್, ಸುಬ್ರಹ್ಮಣ್ಯ ಬಾಸ್ರಿ ಉಡುಪಿ, ಶ್ಯಾಮಲ ಸುಧಾಕರ, ಎಸ್ ದಿನಕರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ, ಗಣೇಶ್ ಶೆಟ್ಟಿ ಮಂದಾರ್ತಿ, ಶಿಕ್ಷಕ ಸದಸ್ಯರಾಗಿ ಕೃಷ್ಣ ಮೊಯ್ಲಿ ಕಾರ್ಕಳ, ಹಾಗೂ ಜಯಲಕ್ಷ್ಮಿ ಬಿ.ಸಿ ಇವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಭಾರತ್ ಸೇವಾ ದಳ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಸಂಘಟಕರಾದ ಫಕೀರ್ ಗೌಡ ಹಳಮನಿಯವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!