ಉಡುಪಿ: ಸ್ವಿಗ್ಗಿ ವಿತರಣಾ ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕರಿಗೆ ಮನವಿ

ಉಡುಪಿ ಜು.29 (ಉಡುಪಿ ಟೈಮ್ಸ್ ವರದಿ): ಸ್ವಿಗ್ಗಿ ಸಂಸ್ಥೆಯ ಡೆಲಿವರಿ ಬಾಯ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಜು. 28 ರಂದು ಜಿಲ್ಲಾಧಿಕರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.  

ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಉತ್ತಮ ಸ್ಪಂದನೆ ನೀಡಿ ಕಾರ್ಮಿಕ ಇಲಾಖೆ ಅಧಿಕಾರಿಯೊಂದಿಗೆ ಮಾತನಾಡಿ ಸ್ವಿಗ್ಗಿ ಡೆಲಿವೆರಿ ಬಾಯ್ಸ್ ರವರುಗಳ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವ ಬರವಸೆಯನ್ನು ನೀಡಿದರು.

ಇನ್ನು ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ಸ್ ಗಳಾಗಿ ಕೆಲಸಮಾಡುತ್ತಿರುವ ತುಳುನಾಡ ಕಾರ್ಮಿಕರಿಗೆ ಉಡುಪಿ ಹಾಗೂ ಮಣಿಪಾಲ ಡಿವಿಷನ್‍ನ ಮ್ಯಾನೆಜರ್ ಚರಿತ್ ಎಂಬವರು ಬಂದ ನಂತರ ಹಲವು ರೀತಿಯ ಸಮಸ್ಯೆಗಳಾಗಿವೆಯೆಂದು ಜು.27 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರಿಗೆ ಮನವಿ ನೀಡಿದ್ದರು. ಅದರಂತೆ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರೊಂದಿಗೆ ಚರ್ಚಿಸಿ ಸ್ವಿಗ್ಗಿ ಸಂಸ್ಥೆಯ ಮ್ಯನೆಜರ್ ಚರಿತ್ ರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದಾಗ ಅವರಿಂದ ಯಾವುದೇ ರೀತಿಯ ಸ್ಪಂದನೆ ಬಂದಿರಲಿಲ್ಲ. ಆದ್ದರಿಂದ ಜು.28 ರಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜೊತೆ ಕಾರ್ಯದರ್ಶಿ ಡ್ಯಾನಿ, ಮನ್ಸೂರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!