ನಿಷೇಧದ ನಡುವೆ ದ.ಕ ಜಿಲ್ಲೆ ಪ್ರವೇಶಿಸಲು ಯತ್ನಿಸಿದ ಪ್ರಮೋದ್ ಮುತಾಲಿಕ್’ಗೆ ತಡೆ

ಉಡುಪಿ ಜು.29 (ಉಡುಪಿ ಟೈಮ್ಸ್ ವರದಿ): ನಿಷೇಧದ ನಡುವೆ ದ.ಕ ಜಿಲ್ಲೆ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಮಂಗಳೂರು-ಉಡುಪಿ ಗಡಿಯಾದ ಹೆಜಮಾಡಿಯಲ್ಲಿ ಪೊಲೀಸರು ತಡೆ ನೀಡಿದ್ದಾರೆ.

ಪ್ರಚೋದನ ಕಾರಿ ಭಾಷಣದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಅವರ ಪ್ರವೇಶವನ್ನು ನಿರ್ಭಂದಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದರು. ಈ ಆದೇಶದ ನಡುವೆ ಉಡುಪಿ ಮೂಲಕ ಮಂಗಳೂರು ತೆರಳಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಹೆಜಮಾಡಿ ಟೋಲ್ ನಲ್ಲಿ ಪೊಲೀಸರು ತಡೆ ನೀಡಿದ್ದಾರೆ.

ಇನ್ನು ದ.ಕ ಜಿಲ್ಲೆಯಲ್ಲಿ ನಡೆದ ಪ್ರವೀಣ್ ಹತ್ಯೆಗೆ ಸಂಬಂಧಿಸಿ ಮಾತನಾಡಿದ ಅವರು, ಬಿಜೆಪಿಗರು ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೇ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ. ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ. ಶ್ರದ್ಧೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದ ಒಬ್ಬ ಕಾರ್ಯಕರ್ತನ ಕಷ್ಟವನ್ನು ನಾಯಕರು ಅರಿತಿದ್ದರೆ ಪ್ರವೀಣ್ ಗೆ ಆಶ್ರಯ ಸಿಗುತ್ತಿತ್ತು. ಬಿಜೆಪಿಗರು ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೇ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ. ಹತ್ಯೆ ಬಳಿಕ ಮನೆಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ನೀಡಿರುವ 25 ಲಕ್ಷ ರೂ ಒಪ್ಪಲಾಗದಿರುವುದು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯಬಾರದು ಎಂದು ಆಗ್ರಹಿಸಿದರು.

ಹಾಗೂ ಬಿಜೆಪಿಯ ನಾಯಕರುಗಳು ತಮ್ಮ 3-4 ಪೀಳಿಗೆ ಉನ್ನುವಂಷ್ಟು ಮಾಡಿಟ್ಟಿದ್ದಾರೆ. ಇದಕ್ಕೆ ನಾನು ಬಿಜೆಪಿಗೆ ಧಿಕ್ಕಾರ ಹೇಳುತ್ತೇನೆ. ಜನರು ಪ್ರವೀಣ್ ಹತ್ಯೆಯಿಂದ ಆಕ್ರೋಶಿತಗೊಂಡಿದ್ದಾರೆ. ಈ ಆಕ್ರೋಶವೇ ಶವಯಾತ್ರೆಯ ದಿನ ಸ್ಫೋಟವಾಗಿದೆ. ಹತ್ಯೆಯನ್ನು ಖಂಡಿಸಿ ರಾಜಿನಾಮೆ ಕೊಟ್ಟವರು ನಿಜವಾದ ಹಿಂದುವಾದಿಗಳು. ಅವರಿಗೆ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಸುರತ್ಕಲ್ ನ ಫಾಝಿಲ್ ಹತ್ಯೆ ಗೆ ಸಂಬಂಧಿಸಿ ಮಾತನಾಡಿದ ಅವರು, ಸುರತ್ಕಲ್ ನಲ್ಲಿ ಯಾವುದಕ್ಕೆ ಕೊಲೆಯಾಗಿದೆ ಗೊತ್ತಿಲ್ಲ. ಕ್ರಿಯೆಗೆ ಪ್ರತಿಕ್ರಿಯೆಯಾಗಬಾರದು. ಇದನ್ನು ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಬಗೆಹರಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!