ಅಂಬಲಪಾಡಿ-ಕಿದಿಯೂರು ಗ್ರಾಮ ಪಂಚಾಯತ್: ಕಸದಿಂದ ರಸ ತ್ಯಾಜ್ಯ ವಿಲೇವಾರಿ ಕಾರ್ಯಗಾರ

ಅಂಬಲಪಾಡಿ-ಕಿದಿಯೂರು ಗ್ರಾಮ ಪಂಚಾಯತ್, ಸಂಜೀವಿನಿ ಸ್ವಸಹಾಯ ಸಂಘ ಮತ್ತು ಚೈತನ್ಯ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಕಸದಿಂದ ರಸ ತ್ಯಾಜ್ಯ ವಿಲವಾರಿ ಕಾರ್ಯಗಾರ ಅಂಬಲಪಾಡಿ-ಕಿದಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಾಗಾರದಲ್ಲಿ ಹಳೆಯ ಬಟ್ಟೆಗಳಿಂದ ಸುಂದರವಾದ ಮ್ಯಾಟ್ ತಯಾರಿಸುವ ಬಗ್ಗೆ ವೈದ್ಯಕೀಯ ಸಮಾಜ ಸೇವಕಿ ನೀಲಾವತಿ ಎ. ಅವರು ತರಬೇತಿ ನೀಡಿದರು. ಅಂಬಲಪಾಡಿ ಪಿಡಿಓ ವಸಂತಿ ಅವರು ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಈ ಕಾರ್ಯಗಾರದ ಮಹತ್ವದ ಬಗ್ಗೆ ತಿಳಿಸಿದರು.

ಶಿಬಿರಾರ್ತಿಗಳು ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿ ಉತ್ತಮ ಪ್ರತಿಕ್ರಿಯೆ ನೀಡಿದರು. ಪಂಚಾಯತು ಅಧ್ಯಕ್ಷೆ ರೋಹಿಣಿ, ಚೈತನ್ಯ ಫೌಂಡೇಶನ್ ನ ಸುನೀಲ್ ಸಾಲ್ಯಾನ್ ಕಡೆಕಾರ್, ರೇಡಿಯೋ ಮಣಿಪಾಲದ ಡಾ. ರಶ್ಮೀ ಅಂಮ್ಮೆಬಳ, ಪಂಚಾಯತು ಸದಸ್ಯರಾದ ಕುಸುಮ , ಸುಮಂಗಳಾ, ಕಡೆಕಾರು ಆರೋಗ್ಯ ಕೇಂದ್ರದ ಸಿಸ್ಟರ್ ಸುಲೋಚನಾ ಮೊದಲಾದವರು ಉಪಸ್ಥಿತರಿದ್ದರು. ವೈದ್ಯಕೀಯ ಸಮಾಜ ಸೇವಕಿ ನೀಲಾವತಿ ಎ. ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!