ಸುಳ್ಯ: ಮುಖ್ಯಮಂತ್ರಿ, ಸರ್ಕಾರದ ವಿರುದ್ದ ಸ್ಥಳೀಯರ ಆಕ್ರೋಶ
ಸುಳ್ಯ: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು.
ಪ್ರವೀಣ್ ಅವರ ಪತ್ನಿ ನೂತನಾ ಹಾಗೂ ಬಂಧುಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮುಖ್ಯಮಂತ್ರಿ ಮಾತನಾಡಿದರು. ಅವರು ಪ್ರವೀಣ್ ಅವರ ತಂದೆ ಶೇಖರ ಪೂಜಾರಿ ಅವರ ಬಳಿ ಮಾತನಾಡುತ್ತಿದ್ದರು.ಆಗ ಪ್ರವೀಣ್ ಅವರ ಭಾವ ವಸಂತ್ ನೋವು ತೋಡಿಕೊಂಡರು. ಆಗ ಬಿಜೆಪಿ ನಾಯಕರು ಅದನ್ನೆಲ್ಲ ಈಗ ಹೇಳುವುದು ಬೇಡ ಎಂದರು. ಅಷ್ಟರಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರ ತಾಳ್ಮೆ ಕಟ್ಟೆ ಒಡೆಯಿತು. ಕಾರ್ಯಕರ್ತರು ನ್ಯಾಯಬೇಕು ಎಂದು ಏಕಾಏಕಿ ಘೋಷಣೆ ಕೂಗಲಾರಂಭಿಸಿದರು. ಕೆಲವರು ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯನ್ನೂ ಕೂಗಿದರು.