ವಿಶ್ವಕರ್ಮ ಸಮಾಜ ಪರಿಶಿಷ್ಟ ಪಂಗಡಕ್ಕೆ- ಶ್ಯಾಮರಾಜ್ ಬಿರ್ತಿ ವಿರೋಧ

ಉಡುಪಿ: ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡವನ್ನು ಸೇರಿಸುವ ಆಗ್ರಹವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಉಗ್ರವಾಗಿ ವಿರೋಧಿಸಿದ್ದಾರೆ.

ಯಾವ ಕಾರಣಕ್ಕೂ ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು. ಇಂದಿನ ಈ ಸಮಾಜದಲ್ಲಿ ಅತೀ ಹೆಚ್ಚು ಅಸ್ಪಶ್ಯತೆ ಆಚರಿಸುವ ಪಂಗಡಗಳಲ್ಲಿ ವಿಶ್ವಕರ್ಮ ಸಮಾಜವೂ ಒಂದು. ಅಷ್ಟೇ ಅಲ್ಲಾ ಈ ವಿಶ್ವಕರ್ಮ ಸಮಾಜದವರು ತಮ್ಮನ್ನು ತಾವು ಅತೀ ಮೇಲ್ವರ್ಗದವರು ಎಂದು ತೋರಿಸಿಕೊಳ್ಳಲು ಮೊದಲು ಬ್ರಾಹ್ಮಣರಷ್ಟೇ ಹಾಕಿಕೊಳ್ಳುತ್ತಿದ್ದ ಉಪನಾಮೆ ಆಚಾರ್ಯ ಪದವನ್ನು ಆಚಾರಿ ಬದಲಿಗೆ ಬಳಸುತ್ತಿದ್ದಾರೆ. ಇಂದಿಗೂ ನಮ್ಮನ್ನು ತಮ್ಮ ಅಂಗಳಕ್ಕೂ ಬಿಟ್ಟುಕೊಳ್ಳದ ವರ್ಗದಲ್ಲಿ ಈ ವಿಶ್ವಕರ್ಮ ವರ್ಗವೂ ಒಂದು, ನನ್ನ ಬಾಲ್ಯದ ದಿನಗಳಲ್ಲಿ ನಾವು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ರಸ್ತೆ ಬಿಟ್ಟು ಚರಂಡಿಯಲ್ಲಿ ನಿಂತು ನಾವು ಮುಂದೆ ಸಾಗಿದ ನಂತರ ರಸ್ತೆಯಲ್ಲಿ ನಡಿಗೆ ಮುಂದುವರಿಸಿದ ವರ್ಗದವರು ಇವರು.

ಇವತ್ತೀಗೂ ನಮ್ಮನ್ನು ಸಮಾಜದಲ್ಲಿ ತುಚ್ಛರಂತೆ ನಡೆಸಿಕೊಂಡು ತಮ್ಮ ಮನೆಯೊಳಗೆ ಕೆಲವೊಂದು ಹಳ್ಳಿಗಳಲ್ಲಿ ಅವರ ಅಂಗಳಕ್ಕೂ ನಮಗೆ ಪ್ರವೇಶ ನಿಷಿದ್ಧವಾಗಿದೆ. ಬರೀ ಮೀಸಲಾತಿಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಆಗ್ರಹವೋ ಇಲ್ಲ ನಮ್ಮ ಪರಿಶಿಷ ಪಂಗಡದ ಹುಡುಗಿಯನ್ನು ಸಾರ್ವಜನಿಕವಾಗಿ ಮದುವೆಯಾಗಲು ತಯಾರಿದ್ದಾರೋ ತಿಳಿಸಬೇಕು ಎಂದು ಶ್ಯಾಮರಾಜ್ ಬಿರ್ತಿಯವರು ಪ್ರಶ್ನಿಸಿದ್ದಾರೆ.

ಒಂದು ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದೇ ಆದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!