ಉಡುಪಿ: ತೋಟಗಾರಿಕೆ ಸಸಿಗಳು ಲಭ್ಯ
ಉಡುಪಿ, ಜು.27: ತೋಟಗಾರಿಕೆ ಇಲಾಖೆಯ ವತಿಯಿಂದ ರೈತರು ಹಾಗೂ ಸಾರ್ವಜನಿಕರ ಬೇಡಿಕೆಯ ಆಧಾರದ ಮೇಲೆ ಬ್ರಹ್ಮಾವರ ತಾಲೂಕು ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ತೋಟಗಾರಿಕಾ ಗಿಡಗಳಾದ ಅಡಿಕೆ, ಕಾಳುಮೆಣಸು, ತೆಂಗು, ಕರಿಬೇವು ಹಾಗೂ ನಿಂಬೆ ಸಸಿಗಳು ಇಲಾಖಾ ದರದಲ್ಲಿ ಲಭ್ಯವಿರುತ್ತದೆ.
ಗಿಡಗಳ ಖರೀದಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಮಿತ್ ಮೊ.ನಂ: 8970642283, 7022757870 ಅಥವಾ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.