ಪ್ರವೀಣ್ ಹತ್ಯೆ ಖಂಡಿಸಿ ಕೋಟ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜೀನಾಮೆ

ಕೋಟ ಜು.27: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯಿಂದ ಮನನೊಂದು ಕೃತ್ಯವನ್ನು ಖಂಡಿಸಿ ಕೋಟ ಬಿಜೆಪಿ ಯುವಮೋರ್ಚಾ ಅಧ್ಯಕ್ಷ  ಸುಶಾಂತ್‌ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವವರು ಕೊಲೆಯಾಗುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜ್ಯ ಸರ್ಕಾರ ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು ಬಂಧಿಸಿದಂತೆ ಮಾಡಿ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಾಗೂ ಪರಿಸ್ಥಿತಿ ಇಂದು ಪ್ರವೀಣ್… ನಾಳೆ ಮತ್ತೊಬ್ಬರು ಎನ್ನುವಂತಿದ್ದು, ನಿರಂತರವಾಗಿ ನೋವು ಅನುಭವಿಸುತ್ತಿದ್ದೇವೆ ಅದಕ್ಕಾಗಿ ಈ ರಾಜಿನಾಮೆ ತೀರ್ಮಾನ ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನು ಸುಶಾಂತ್‌ ಶೆಟ್ಟಿ ಅವರು ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದವರು ಎಂಬುದು ಗಮನಾರ್ಹ ಸಂಗತಿಯಾಗಿದೆ.

Leave a Reply

Your email address will not be published. Required fields are marked *

error: Content is protected !!