ಉಡುಪಿ ಡಿಸಿಸಿ ಬ್ಯಾಂಕ್: ಅಪಘಾತ ಪರಿಹಾರ ಚೆಕ್ ವಿತರಣೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ಪ್ರವರ್ತಿಸಲ್ಪಟ್ಟ ಸೂರ್ಯೋದಯ ನವೋದಯ ಸ್ವ-ಸಹಾಯ ಗುಂಪು ಅಂಬಪಾಡಿ ಇದರ ಸದಸ್ಯೆ ಮಮತಾ ಪೂಜಾರಿ ಅಪಘಾತದಿಂದ ಮೃತಪಟ್ಟ ಅವರ ಕುಟುಂಬಕ್ಕೆ ಒಂದು ಲಕ್ಷ ರೂ. ಮೊತ್ತದ ಚೆಕ್ ಅನ್ನು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಮೃತರ ಪತಿ ಸುಧಾಕರ್ ಪೂಜಾರಿಯವರಿಗೆ ಹಸ್ತಂತರಿಸಿದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ಮುಖ್ಯ ಶಾಖೆಯ ಪ್ರಬಂಧಕ ಸುನಿಲ್ ಕುಮಾರ್, ನೇಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್, ಬ್ಯಾಂಕ್‌ನ ಮೇಲ್ವಿಚಾರಕರಾದ ಹರಿನಾಥ್, ಬಾಲಕೃಷ್ಣ ಭಟ್, ಚಂದ್ರಶೇಖರ್, ಕೃಷ್ಣ ಸಾಲ್ಯಾನ್, ಸಿ.ಎಸ್. ಗೀತಾ ಶಿರ್ವಾ, ಗೀತಾ ಮೂಡುಬೆಳ್ಳೆ, ಸುಮಿತ್ರಾ, ಒಕ್ಕೂಟ ಉಪಾಧ್ಯಕ್ಷ ಶಕಿಲಾ ಡಿ. ರಾವ್ ಉಪಸ್ಥಿತರಿದ್ದರು.