ಮೊಬೈಲ್ ನಂಬರ್ ಕೊಡದ ಮಹಿಳೆಯ ನೈಟಿ ಎಳೆದ ಭೂಪ….

ಹಿರಿಯಡ್ಕ: ಮೊಬೈಲ್ ನಂಬರ್ ಕೊಡದಿದ್ದಕ್ಕೆ ಮಹಿಳೆಯ ನೈಟಿ ಎಳೆದಾಡಿ ಜೀವಬೆದರಿಕೆಯೊಡ್ಡಿದ ಘಟನೆ ಹಿರಿಯಡಕ 41ನೇ ಶೀರೂರಿನ ಹರಿಖಂಡಿಗೆ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹರಿಖಂಡಿಗೆ ನಿವಾಸಿ 43ವರ್ಷದ ಆಶಾ ಪೂಜಾರಿ ಎಂಬವರು ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ. ಜುಲೈ 24ರಂದು ಮಧ್ಯಾಹ್ನ ಆಶಾ ಅವರ ಮಗನ ಪರಿಚಯದ ಖಲೀಲ್ ಎಂಬಾತನು ಮನೆಯ ಅಂಗಳಕ್ಕೆ ಬಂದು ಮಗ ಧೀರಾಜ್ ಇದ್ದಾನೆಯೆಂದು ಕೇಳಿದ್ದಾನೆ‌. ಆಗ ಮನೆಯಿಂದ ಆಶಾ ಅವರು ಹೊರಗೆ ಬಂದಿದ್ದಾರೆ. ಆರೋಪಿ ಅವರ ಮೊಬೈಲ್ ನಂಬರ್ ಕೇಳಿದ್ದು, ಅದಕ್ಕೆ ನೀನಗೇಕೆ ನನ್ನ ಮೊಬೈಲ್ ನಂಬರ್ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಆಶಾ ಅವರ ನೈಟಿ ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಆಶಾ ಅವರ ಬೊಬ್ಬೆ ಕೇಳಿ ನೆರೆಮನೆಯವರು ಓಡಿ ಬಂದದ್ದನ್ನು ನೋಡಿ ಆರೋಪಿ ಖಲೀಲ್ ‘ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಜೀವ ಸಮೇತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ‌ ಎಂದು ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!