ರಾ.ಹೆದ್ದಾರಿ ಗುಂಡಿ ಮುಚ್ಚದಿದ್ದಲ್ಲಿ ವಿನೂತನ ಪ್ರತಿಭಟನೆ: ಕಾಪು ಬ್ಲಾಕ್ ಯುವ ಕಾಂಗ್ರೆಸ್
ಉಡಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು ಉಂಟಾಗಿರುವುದಿರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಹೆದ್ದಾರಿಯಲ್ಲಿ ಉಂಟಾಗಿರುವ ಈ ಹೊಂಡಗಳನ್ನು ಮುಚ್ಚಲು 10 ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ೬೬ ಹೆಜಮಾಡಿಯಿಂದ ಉದ್ಯಾವರದ ವರೆಗೆ ವಿನೂತನ ರೀತಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಎಚ್ಚರಿಸಿದೆ.
ಈ ಮಳೆಗಾಲ ಆರಂಭದಿಂದ ಇದುವರೆಗೆ ಹಲವಾರು ಅಪಘಾತಗಳು ನಡೆದಿದ್ದು, ಹೆಚ್ಚಿನ ಅಪಘಾತಗಳು ಹೊಂಡ ತಪ್ಪಿಸಲು ಹೋಗಿ ನಡೆದಿದೆ. ಅಲ್ಲದೆ ಈ ಅಪಘಾತಗಳಲ್ಲಿ ಹೆಚ್ಚಿನ ಸಾವು ನೋವು ಉಂಟಾಗಿದೆ. ಮೂರು ಮೂರು ಕಡೆ ಟೋಲ್ ಪಾವತಿಸಿಯೂ ಹೊಂಡಗಳಿಗೆ ಮುಕ್ತಿ ನೀಡದೆ ಇರುವುದು ದುರಾದೃಷ್ಟ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತು ಕೂಡಲೇ ಹೊಂಡಗನ್ನು ಮುಚ್ಚಿಸಿ ಅಮಾಯಕ ವಾಹನ ಸವಾರರ ಜೀವ ರಕ್ಷಿಸುವಂತೆ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆಗ್ರಹಿಸಿದ್ದಾರೆ.