ಉಡುಪಿ: ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ 1.89 ಲಕ್ಷ ರೂ. ವಂಚನೆ

ಉಡುಪಿ ಜು.26 (ಉಡುಪಿ ಟೈಮ್ಸ್ ವರದಿ): ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ ಕರೆಮಾಡಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ ಎಂದು ತಿಳಿಸಿ ಕಾರ್ಡ್ ನ ಮಾಹಿತಿ ಪಡೆದು ವ್ಯಕ್ತಿಯೊಬ್ಬರಿಂದ 1.89 ಲಕ್ಷ ರೂ  ದೋಚಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಣ ಕಳೆದುಕೊಂಡ ಶಿರಿಬೀಡು ನಿವಾಸಿ ಓಂ ಪ್ರಕಾಶ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಜು.25  ರಂದು ಓಂ ಪ್ರಕಾಶ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂ.ಸಂಖ್ಯೆ 18605005555 ರಿಂದ ಕರೆ ಮಾಡಿ ತಾನು ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ನಂಬಿಸಿ, ಓಂ ಪ್ರಕಾಶ ಅವರ ಕ್ರೆಡಿಟ್ ಕಾರ್ಡ ಬ್ಲಾಕ್ ಆಗಿರುವುದಾಗಿ ತಿಳಿಸಿ ಯಾವುದೋ ರೀತಿಯಲ್ಲಿ ಕಾರ್ಡನ ಮಾಹಿತಿಯನ್ನು ಪಡೆದು ಅದರಿಂದ ಹಂತ ಹಂತವಾಗಿ ಒಟ್ಟು 1,89,880‌ ರೂ. ಹಣವನ್ನು ಕಾನೂನುಬಾಹಿರವಾಗಿ ವಿದ್  ಡ್ರಾ ಮಾಡಿಸಿಕೊಂಡಿ ಕೊಂಡು ನಷ್ಟ ಉಂಟು ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

 ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!